ಸನ್ಮಾರ್ಗ ವಾರ್ತೆ
ಡಾರ್ಜಲಿಂಗ್,ಸೆ.2: ಗೂರ್ಖಾ ಸಮುದಾಯದ ಒಂದು ಲಕ್ಷ ಮಂದಿ ಅಸ್ಸಾಂ ಪೌರತ್ವ ಪಟ್ಟಿಯಿಂದ ಹೊರಗಿದ್ದಾರೆ ಎನ್ನುವುದು ಅಪಪ್ರಚಾರ ಎಂದು ಬಿಜೆಪಿ ಸಂಸದ ರಾಜು ಬಿಸ್ತಾ ಹೇಳಿದ್ದಾರೆ. “ಇದಕ್ಕೆ ಯಾವುದೇ ಆಧಾರವಿಲ್ಲ. ಕೆಲವು ದಿವಸಗಳಾದ ಬಳಿಕ ಅಧಿಕೃತ ಲೆಕ್ಕ ಸಿಕ್ಕಿದ ಮೇಲೆಯೇ ಎಷ್ಟು ಮಂದಿ ಪಟ್ಟಿಯಿಂದ ಹೊರಗಿದ್ದಾರೆ ಎನ್ನುವುದನ್ನು ತಿಳಿಯಲು ಸಾಧ್ಯ” ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ಲಕ್ಷ ಗೂರ್ಖಾಗಳು ಪಟ್ಟಿಯಲ್ಲಿ ಜಾಗ ಪಡೆದಿಲ್ಲ ಎನ್ನುವ ಪ್ರಚಾರ ನಡೆಯುತ್ತಿದ್ದು ಇದಕ್ಕೆ ಬಿಸ್ತಾ ಉತ್ತರಿಸಲಿ ಎಂದು ಗೂರ್ಖಾ ಲ್ಯಾಂಡ್ ಟೆರಿಟೋರಿಯಲ್ ಅಡ್ಮಿಸ್ಟ್ರೇಶನ್ ಅಧ್ಯಕ್ಷ ಅನಿತ್ ಥಾಪ ಹೇಳಿದ್ದರು. ಸ್ವಾತಂತ್ರ ಹೋರಾಟಗಾರ ಗೂರ್ಖಾ ಸಮುದಾಯ ನಾಯಕ ಚಿಟ್ಟಿಲಾಲ್ ಉಪಾಧ್ಯಾಯರ ಮೊಮ್ಮಗಳು ಮಂಜುದೇವಿ ಕೂಡ ಪಟ್ಟಿಯಿಂದ ಹೊರಗಿದ್ದಾರೆ ಎಂದು ಅನಿತ್ ಥಾಪ ಹೇಳಿದ್ದಾರೆ. ಅಸ್ಸಾಂ ಪೌರತ್ವ ಪಟ್ಟಿಗೆ ಸಂಬಂದಿಸಿ ಅಪಪ್ರಚಾರ ನಡೆಯುತ್ತಿದೆ. ಜನರು ಕಂಗಾಲಾಗಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಮಾಡಬಾರದೆಂದು ಬಿಸ್ತಾ ಮನವಿ ಮಾಡಿದ್ದಾರೆ.












