ಝಾಕಿರ್ ನಾಯ್ಕ್‌ರನ್ನು ಭಾರತಕ್ಕೊಪ್ಪಿಸಿ- ಪ್ರಧಾನಿ ಮೋದಿ

0
1020

ವ್ಲಾಡಿವೊಸ್ಟೋಕ್, ಸೆ. 5: ಮಲೇಶ್ಯದಲ್ಲಿರುವ ಝಾಕಿರ್ ನಾಯ್ಕ್‌ರನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಷ್ಯಾದ ವ್ಲಾಡಿವೊಸ್ಟೋಟಕ್‍ನಲ್ಲಿ ನಡೆಯುವ ಆರ್ಥಿಕ ಶೃಂಗದಲ್ಲಿ ಮಲೇಶ್ಯದ ಪ್ರಧಾನಿ ಮುಹಾತೀರ್ ಮುಹಮ್ಮದ್‍ರನ್ನು ಭೇಟಿಯಾದ ವೇಳೆ ಮಲೇಶ್ಯ ಆಶ್ರಯ ನೀಡಿದ ನಾಯ್ಕ್‍ರನ್ನು ಭಾರತಕ್ಕೆ ಮರಳಿಸಬೇಕೆಂದು ಮೋದಿ ಹೇಳಿದ್ದಾರೆ. ಭಾರತದ ಆಗ್ರಹಕ್ಕೆ ಮುಹಾತೀರ್‍ರ ಪೂರಕವಾಗಿ ಪ್ರತಿಕ್ರಿಯಿಸಿದರೆಂದು ವರದಿಯಾಗಿದೆ.

ಝಾಕಿರ್ ನಾಯ್ಕ್‌ರನ್ನು ಭಾರತಕ್ಕೊಪ್ಪಿಸುವ ವಿಷಯದಲ್ಲಿ ಎರಡು ದೇಶಗಳ ಅಧಿಕಾರಿಗಳು ಚರ್ಚಿಸಿ ತೀರ್ಮಾನ ತಳೆಯಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಝಾಕಿರ್ ನಾಯ್ಕ್‌ರನ್ನು ಹಲವು ಬಾರಿ ಭಾರತ ವಶಕ್ಕೆ ಪಡೆಯಲು ಯತ್ನಿಸಿತ್ತು. ಅದಲ್ಲದೆ ಮೂರು ಬಾರಿ ಭಾರತ ವಿವಿಧ ಏಜೆನ್ಸಿಗಳ ಮೂಲಕ ಝಾಕಿರ್ ನಾಯ್ಕ್‌ರನ್ನು ಹಸ್ತಾಂತರಿಸುವಂತೆ ಇಂಟರ್‍ಫೋಲ್ ಸಂಪರ್ಕಿಸಿತ್ತು. ನಾಯ್ಕ್ ವಿರುದ್ಧ ಭಾರತದ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಭಾರತದ ಆಗ್ರಹವನ್ನು ಮಲೇಶ್ಯ ನಿರಾಕರಿಸಿತ್ತು. 2016ರಲ್ಲಿ ಕಪ್ಪು ಹಣ ಬಿಳಿ ಮಾಡಿದ ಪ್ರಕರಣದಲ್ಲಿ ಝಾಕಿರ್ ನಾಯ್ಕ್ ವಿರುದ್ಧ ಭಾರತದಲ್ಲಿ ಕೇಸು ದಾಖಲಾಗಿದೆ. ನಂತರ ನಾಯ್ಕ್ ಮಲೇಶ್ಯದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಅವರಿಗೆ ಈಗ ಮಲೇಶ್ಯದ ಪೌರತ್ವವಿದೆ.