ಸನ್ಮಾರ್ಗ ವಾರ್ತೆ
ಆಲಪ್ಪುಝ,ಸೆ.6:”ಟೈಟಾನಿಯಂ ಭ್ರಷ್ಟಾಚಾರ ಪ್ರಕರಣ ಸಿಬಿಐಗೆ ವಹಿಸಿಕೊಟ್ಟ ಸರಕಾರದ ತೀರ್ಮಾನವನ್ನು ಸ್ವಾಗತಿಸುತ್ತೇನೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಪಿಎಸ್ ಶ್ರೀಧರನ್ ಪಿಳ್ಳೆ ಹೇಳಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರಿಗಳ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ ಟೈಟಾನಿಯಂ ಕೂಡ ಒಂದು” ಎಂದು ಅಯ್ಯರ್ ಜಂಕ್ಷನ್ ಸಮೀಪ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯ ಶಂಕುಸ್ಥಾಪನೆ ಮಾಡಿ ಅವರು ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು.
ಸಚಿವ ರಾಮಚಂದ್ರನ್ ನಾಯರ್ ರಾಜೀನಾಮೆ ಮತ್ತು ಅಂದಿನ ಪರಿಸ್ಥಿತಿಯ ಕುರಿತು ವಕೀಲನೆಂಬ ನೆಲೆಯಲ್ಲಿ ನನಗೆ ಚೆನ್ನಾಗಿ ಗೊತ್ತು. ರಾಜ್ಯದಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹನ್ನೊಂದು ಲಕ್ಷ ದಾಟಿದೆ ಎಂದು ಶ್ರೀಧರನ್ ಪಿಳ್ಳೆ ತಿಳಿಸಿದರು. ಕಾಂಗ್ರೆಸ್ ಮತ್ತು ಸಿಪಿಎಂನಿಂದ ಬಹಳಷ್ಟು ಮಂದಿ ಬಿಜೆಪಿ ಸೇರುತ್ತಿದ್ದಾರೆ. ಅದರಲ್ಲಿೂ ಸಿಪಿಎಂನವರೇ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಪಾರ್ಟಿ ಸೇರ್ಪಡೆಯಾದವರ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.












