ಗೋವಿಂದ ಪನ್ಸಾರೆ ಹತ್ಯೆ ಪ್ರಕರಣ; ಮೂವರಿಗೆ ಕಸ್ಟಡಿ

0
562

ಸನ್ಮಾರ್ಗ ವಾರ್ತೆ

ಬೆಂಗಳೂರು, ಸೆ.6: ಮಹಾರಾಷ್ಟ್ರದಲ್ಲಿ ಗೋವಿಂದ ಪನ್ಸಾರೆಯವರನ್ನು ಹತ್ಯೆಮಾಡಿದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಮಹಾರಾಷ್ಟ್ರದ ವಿಶೇಷ ತನಿಖಾ ದಳ ಎಸ್‍ಐಟಿ ಆರೋಪಿಗಳನ್ನು ಬಂಧಿಸಿದ್ದು ಇವರನ್ನು ಕೊಲ್ಲಾಪುರ ಕೋರ್ಟಿಗೆ ಹಾಜರುಪಡಿಸಲಾಗುವುದು.

2015 ಫೆಬ್ರುವರಿ ಹದಿನಾರರಂದು ಕೊಲ್ಲಾಪುರದಲ್ಲಿ ಮಾರ್ನಿಂಗ್ ವಾಕ್ ಹೊರಟಿದ್ದ ಗೋವಿಂದ ಪನ್ಸಾರೆಯವರನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಪತ್ನಿ ಉಮಾರಿಗೂ ಗುಂಡು ಏಟು ತಗಲಿತ್ತು.ಗಂಭೀರ ಗಾಯಗೊಂಡಿದ್ದ ಪನ್ಸಾರೆ ಆಸ್ಪತ್ರೆಯಲ್ಲಿ ಫೆಬ್ರುವರಿ 20ರಂದು ಮೃತಪಟ್ಟಿದ್ದರು.
ಪ್ರಕರಣದಲ್ಲಿ ಹಿಂದುತ್ವ ಸಂಘಟನೆ ಸನಾತನ್ ಸಂಸ್ಥೆ ನಾಯಕನನ್ನು ಆರೋಪಿಯಾಗಿ ಹೆಸರಿಸಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.