ಚಂದ್ರಯಾನ್-2 ಸಲಹೆಗಾರ ವಿಜ್ಞಾನಿ ಅಸ್ಸಾಂ ಪೌರತ್ವ ಪಟ್ಟಿಯಲ್ಲಿಲ್ಲ!

0
871

ಗುವಾಹಟಿ,ಸೆ.7: ಪ್ರಮುಖ ವಿಜ್ಞಾನಿ, ಚಂದ್ರಯಾನ-2 ಸಲಹೆಗಾರ ಜಿತೇಂದ್ರನಾಥ್ ಗೋ ಸ್ವಾಮಿ ಮತ್ತು ಕುಟುಂಬ ಅಸ್ಸಾಂ ಪೌರತ್ವ ಪಟ್ಟಿಯಲ್ಲಿಲ್ಲ. ಅವರು ಪೌರತ್ವ ಪಟ್ಟಿಗೆ ಅರ್ಜಿ ಸಲ್ಲಿಸೇ ಇರುವುದು ಇದಕ್ಕೆ ಕಾರಣವಾಗಿದೆ. ಗುಜರಾತ್‍ನಲ್ಲಿ ಮತದಾನದ ಹಕ್ಕು ಇರುವುದರಿಂದ ಗೋಸ್ವಾಮಿ ಕುಟುಂಬ ಅಸ್ಸಾಂ ಪೌರತ್ವ ಪಟ್ಟಿಗೆ ಸೇರಿಸಲು ಅರ್ಜಿಸಲ್ಲಿಸಿರಲಿಲ್ಲ ಎಂದು ಅವರ ಸಹೋದರ ಮತ್ತು ಅಸ್ಸಾಂ ಶಾಸಕರಾದ ಹಿತೇಂದ್ರನಾಥ್ ಗೋಸ್ವಾಮಿ ಹೇಳಿದರು.