ಹರಿಯಾಣದಲ್ಲಿ ಕಾಂಗ್ರೆಸ್ ಗೆ ಆಘಾತ: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿಜೆಪಿಗೆ

0
769

ಸನ್ಮಾರ್ಗ ವಾರ್ತೆ-

ಚಂಡೀಗಡ, ಸೆ. 8: ಹರಿಯಾಣದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರಾ ಚೌಹಾನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತ್ರಿವಳಿ ತಲಾಕ್, ಆರ್ಟಿಕಲ್ 370 ರದ್ದು ವಿಷಯದಲ್ಲಿ ಕಾಂಗ್ರೆಸ್ ನಿಲುವು ವಿರೋಧಿಸಿ ಬಿಜೆಪಿ ಸೇರಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ರೋಹತಕ್‍ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸುಭಾಶ್ ಬಲಾಲರ ಉಪಸ್ಥಿತಿಯಲ್ಲಿ ಅವರು ಬಿಜೆಪಿ ಸದಸ್ಯತ್ವ ಸ್ವೀಕರಿಸಿದರು. ತ್ರಿವಳಿ ತಲಾಕ್ ಮಸೂದೆ ಮಹಿಳೆಯರನ್ನು ಸಂರಕ್ಷಿಸಲು ಉಪಯುಕ್ತವೆಂಬ ತನ್ನ ನಿಲುವನ್ನು ಅವರು ಪುನರುಚ್ಚರಿಸಿದರು. ಸರಿಯಾಗಿರುವುದರ ಜೊತೆ ನಿಲ್ಲಲು ಸಾಧ್ಯವಾಗದಿದ್ದರೆ ರಾಜಕೀಯದಲ್ಲಿದ್ದು ಪ್ರಯೋಜನವಿಲ್ಲ ಎಂದು ಅವರು ಹೇಳಿದರು.