ಹಿಂದಿ ಜನಸಾಮಾನ್ಯರ ಭಾಷೆಯಲ್ಲ; ‘ಹಿಂದಿ’ ಹೇರಿಕೆ ಒಡೆದು ಆಳುವ ಬ್ರಿಟಿಷ್ ನೀತಿ- ಜಸ್ಟೀಸ್ ಮಾರ್ಕಂಡೇಯ ಕಟ್ಜು

0
1054

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.16: ಹಿಂದಿ ಜನಸಾಮಾನ್ಯರ ಭಾಷೆಯಲ್ಲ, ಹಿಂದಿ ಹೇರಿಕೆ ಒಡೆದು ಆಳುವ ಬ್ರಿಟಿಷ್ ನೀತಿಯಾಗಿದೆ ಎಂದು ಜ್ಸಟಿಸ್ ಮಾರ್ಕಂಡೇಯ ಕಟ್ಜು ಹೇಳಿದರು. ಪ್ರಮುಖ ಇಂಗ್ಲಿಷ್ ವಾರಪತ್ರಿಕೆಗೆ ಅವರು ಈ ಕುರಿತಂತೆ ಲೇಖನ ಬರೆದಿದ್ದಾರೆ.

‘ಹಿಂದಿ ವಲಯದ ನಗರಗಳಲ್ಲಿ ಕೂಡ ಹಿಂದಿ ಜನಸಾಮಾನ್ಯರ ಭಾಷೆಯಾಗಿಲ್ಲ. ಅಲ್ಲಿ ಹಿಂದೂಸ್ಥಾನಿ, ಘಟಿಬೊಲಿ ಇವೆ. ಗ್ರಾಮಗಳಲ್ಲಿ ಭಾಷೆಯಲ್ಲಿ ಅಂತರವಿದೆ. ಔದಿ, ಬ್ರಿಜ್‍ಭಾಷ, ಭೋಜ್‍ಪುರಿ, ಮೈಥಿಲಿ, ಮೈಘ, ಮೆವಾರಿ, ಮರ್‍ವಾರಿ ಇತ್ಯಾದಿ ಭಾಷೆಗಳನ್ನು ಗ್ರಾಮಗಳಲ್ಲಿ ಕಾಣಬಹುದು.

ಅತ್ತ ನೋಡಿ ಎನ್ನುವುದಕ್ಕೆ ನಾವು ಹಿಂದುಸ್ತಾನಿಯಲ್ಲಿ ಉದರ್ ದೇಖಿಯೆ ಎನ್ನುತ್ತೇವೆ. ಹಿಂದಿಯಲ್ಲಿ ಉದರ್ ಅವ್‍ಲೋಕನ್ ಕೀಜಿಯೇ ಆಗುತ್ತದೆ. ಸಾಮಾನ್ಯರಿಗೆ ಯಾವತ್ತೂ ಅವಲೋಕನ್ ಉಪಯೋಗಿಸುವುದಿಲ್ಲ. ಹಿಂದಿ ಸರಿಯಾಗಿ ಪ್ರತಿಷ್ಠಾಪಿಸುವ ಸೂತ್ರಬದ್ಧ ಯತ್ನ ನಡೆಯುತ್ತಿದೆ. ಪ್ರಚಾರದಲ್ಲಿರುವ ಪರ್ಶಿಯನ್ -ಅರಬಿಕ್ ಪದಗಳ ಬದಲು ಈವರೆಗೆ ಸಾಮಾನ್ಯರು ಉಪಯೋಗಿಸದ ಸಂಸ್ಕೃತ ಪದಗಳನ್ನು ನುಗ್ಗಿಸಲಾಯಿತು.

ಇದಕ್ಕೆ ಹಲವು ಉದಾಹರಣೆಗಳು ಇವೆ. ಹಿಂದಿ ಮೂಲಭೂತ ವಾದಿಗಳು ಭಾರತದ ಸಂಸ್ಕೃತಿಯಲ್ಲಿ ತಳವೂರಿದ್ದ ಎರಡು ಭಾಷೆ, ಸಂಸ್ಕೃತ ಮತ್ತು ಉರ್ದುವಿಗೆ ದೊಡ್ಡ ದೋಷವನ್ನುಂಟುಮಾಡಿದ್ದಾರೆ. ಸಂಸ್ಕೃತ ಅವರು ಭಾಷೆ ಮಾಡಿದರು. ಆದರೆ ಜಗತ್ತಿನಲ್ಲಿ ಉತ್ಕೃಷ್ಟ ಕವಿತೆಗಳನ್ನು ಉರ್ದುವಿನಲ್ಲಿ ಕಾಣಬಹುದು. ಅವರು ವಂಶ ಹತ್ಯೆಯಲ್ಲಿ ತಲುಪಿಸಿದರು’ ಎಂದು ಕಟ್ಜು ಹೇಳಿದರು.