ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.18:ವಾಹನ ಕ್ಷೇತ್ರದ ಜಿಎಸ್‍ಟಿ ದರವನ್ನಹ ಕಡಿಮೆ ಮಾಡುವುದಿಲ್ಲ ಎಂಬ ಸೂಚನೆ ಲಭ್ಯವಾಗಿದೆ. ಈ ವಾರ ಇದಕ್ಕೆ ಸಂಬಂಧಿಸಿ ತೀರ್ಮಾನ ಹೊರ ಬರಲಿದ್ದು ತೆರಿಗೆ ಕಡಿಮೆ ಮಾಡಿದರೆ ಭಾರೀ ವರಮಾನ ನಷ್ಟವಾಗವುದು ಎಂದು ಬೆಟ್ಟುಮಾಡಿ ಸರಕಾರ ತೀರ್ಮಾನದಿಂದ ಹಿಂದೆ ಸರಿದಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರ ಸರಕಾರದ ಅಧಿಕಾರಿಗಳನ್ನು ಉದ್ಧರಿಸಿ ಹಿಂದೂಸ್ಥಾನ ಟೈಮ್ಸ್ ವರದಿ ಮಾಡಿದ್ದು ವಾಹನ ಕ್ಷೇತ್ರದ ಜಿಎಸ್‍ಟಿ 28 ಶೇಕಡವನ್ನು ಹದಿನೆಂಟು ಶೇಕಡಕ್ಕೆ ಇಳಿಸಿದರೆ 500 ಬಿಲಿಯನ್ ರೂಪಾಯಿ ತೆರಿಗೆ ನಷ್ಟವಾಗುವುದಾಗಿ ಲೆಕ್ಕ ಮಾಡಲಾಗಿದೆ.
ಎಪ್ರಿಲ್-ಜುಲೈಯಲ್ಲಿ ಭಾರತದ ಒಟ್ಟು ತೆರಿಗೆ ವರಮಾನದಲ್ಲಿ ಶೇ.7ರಷ್ಟು ಕುಂಠಿತವಾಗಿದ್ದು 4.9 ಟ್ರಿಲಿಯನ್ ರೂಪಾಯಿ ತೆರಿಗೆ ವರಮಾನ ಕಡಿಮೆಯಾಗಿತ್ತು. ಈ ನಡುವೆ ಜಿಎಸ್‍ಟಿ ಕಡಿಮೆ ಮಾಡಿದರೆ ಅದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು ಎನ್ನಲಾಗುತ್ತಿದೆ. ವಾಹನ ಕ್ಷೇತ್ರದ ಜಿಎಸ್‍ಟಿ ಕಡಿಮೆ ಮಾಡುವುದನ್ನು ಜಿಎಸ್‍ಟಿ ಕೌನ್ಸಿಲ್‍ನಲ್ಲಿರುವ ರಾಜ್ಯಗಳ ಪ್ರತಿನಿಧಿಗಳು ತೀರಾ ವಿರೋಧಿಸಿದ್ದಾರೆ ಎಂದು ಪತ್ರಿಕೆ ವರದಿ ತಿಳಿಸಿದೆ.












