ಸನ್ಮಾರ್ಗ ವಾರ್ತೆ-
ನವದೆಹಲಿ; ಸೆ. 21- ಕಸೂತಿ ಕಂಬಗಳು, ಪ್ರತಿಮೆಗಳು, ಎರಡು ಸಿಂಹಗಳಿಂದ ಸುತ್ತುವರಿದ ಗರುಡ ಮತ್ತು ದ್ವಾರಪಾಲ್ ಮೇಲೆ ಕಮಲದ ಕೆತ್ತನೆಗಳು ಮಸೀದಿಯ ವಿಶಿಷ್ಟ ಲಕ್ಷಣಗಳಲ್ಲ ಎಂದು ಸುಪ್ರೀಂ ಕೋರ್ಟ್ ಅಯೋಧ್ಯೆಯ ವಿಚಾರಣೆಯ ವೇಳೆ ಮುಸ್ಲಿಂ ಪಕ್ಷದ ಮುಂದೆ ತಕರಾರು ಮಂಡಿಸಿತು.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ನೇತೃತ್ವದ ಸಂವಿಧಾನ ಪೀಠದ ಪ್ರಶ್ನೆಗಳು ವಾಸ್ತುಶಿಲ್ಪದ ಲಕ್ಷಣಗಳು ಮತ್ತು ಬಾಬರಿ ಮಸೀದಿ- ರಾಮ್ಜನ್ಮಭೂಮಿ ತಾಣದಿಂದ ಪತ್ತೆಯಾಗಿದೆ ಎಂದು ನಂಬಲಾದ ವಸ್ತುಗಳ ಛಾಯಾಚಿತ್ರಗಳನ್ನು ಆಧರಿಸಿತ್ತು.
ಆದರೆ ಹಿರಿಯ ವಕೀಲ ರಾಜೀವ್ ಧವನ್ ನ್ಯಾಯಾಲಯದ ಪ್ರಶ್ನೆಗಳನ್ನು ಉತ್ತರಿಸುತ್ತಾ, “ಈ ಅಲಂಕಾರಿಕ ತುಣುಕುಗಳು ಎಲ್ಲಿಂದಲಾದರೂ ತ೦ದಿರಬಹುದು” ಎಂದು ಹೇಳಿದರು. ಕೆತ್ತನೆಗಳ ಈ ವಸ್ತುಗಳು ಮತ್ತು ಛಾಯಾಚಿತ್ರಗಳು ಒಂದು ಕಾಲದಲ್ಲಿ ಭಗವಾನ್ ರಾಮ್ ನ ದೇವಾಲಯವಿತ್ತು ಎಂಬುದಕ್ಕೆ ಒಂದು ನಿರ್ಣಾಯಕ ಪುರಾವೆ ಆಗುವುದಿಲ್ಲ. ರಾಮ್ಜನ್ಮಭೂಮಿಯಲ್ಲಿ ದೇವರ ಚಿತ್ರಣಕ್ಕೆ ಯಾವುದೇ ನೇರ ಪುರಾವೆಗಳಿಲ್ಲ ಎಂದು ಅವರು ವಾದಿಸಿದರು.
ಭಗವಾನ್ ರಾಮ್ ದೇವಾಲಯದ ಬಗ್ಗೆ ಹಿಂದೂ ಕಡೆಯ ವಾದವು ಮಸೀದಿಗಳು ಸರಳವಾಗಿರಬೇಕು, ಅಲಂಕರಿಸಬಾರದು ಎಂಬ ಅಭಿಪ್ರಾಯದಿಂದ ಬಲವನ್ನು ಪಡೆದುಕೊಂಡಿದೆ ಎಂದು ಧವನ್ ಹೇಳಿದರು. ಹಿಂದೂ ಪರ ವಾದಗಳು ಕಾನೂನುಬದ್ಧ ಪುರಾವೆಗಿಂತ ಧರ್ಮಶಾಸ್ತ್ರವನ್ನು ಆಧರಿಸಿವೆ ಎಂದು ಶ್ರೀ ಧವನ್ ಹೇಳಿದರು.
ಆಗ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು,
ಮಸೀದಿಯ ಸ್ಥಳದಲ್ಲಿ ಕಂಡುಬರುವ ಅಥವಾ ಬಾಬರಿ ಮಸೀದಿಯ ವಾಸ್ತುಶಿಲ್ಪದ ಭಾಗವಾಗಿ ರೂಪುಗೊಂಡ ಈ ವಸ್ತುಗಳ ಉಪಸ್ಥಿತಿಯು ಸಾಂಸ್ಕೃತಿಕ ಸಂಯೋಜನೆಯಿಂದಾಗಿರಬಹುದು ಎಂದು ಸೂಚಿಸಿದರು. “ಆಕ್ರಮಣಗಳ ನಂತರ ಸಾಂಸ್ಕೃತಿಕ ಸಂಯೋಜನೆಗಳು ಸಂಭವಿಸುತ್ತವೆ. ವಿವಿಧ ದೇಶಗಳಲ್ಲಿ ಕೆಲವು ಧರ್ಮಗಳನ್ನು ಹೇಗೆ ವಿಭಿನ್ನವಾಗಿ ಆಚರಿಸಲಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಗಮನಸೆಳೆದರು.
ಅದಕ್ಕೆ ಅನುಗುಣವಾಗಿ ಧವನ್ ಅವರು,
ಮಸೀದಿಗಳನ್ನು ಮುಸ್ಲಿಮರು ಮಾತ್ರ ನಿರ್ಮಿಸಿಲ್ಲ … ತಾಜ್ ಮಹಲ್ ಅನ್ನು ಮುಸ್ಲಿಮರು ಮಾತ್ರ ನಿರ್ಮಿಸಿಲ್ಲ. ಹಿಂದೂ ಮತ್ತು ಮುಸ್ಲಿಂ ಕಾರ್ಮಿಕರು ಇದಕ್ಕೆ ಕೈಜೋಡಿಸಿದರು. ಕೇರಳದ ದೇವಾಲಯದ ಬಳಿ ಶಿಲುಬೆ ಇರುವ ಕಾರಣ, ದೇವಾಲಯವು ದೇವಾಲಯವಾಗುವುದನ್ನು ಅದು ತಡೆಯುತ್ತದೆ ಎಂದರ್ಥವಲ್ಲ ಎಂದು ಶ್ರೀ ಧವನ್ ವಿವಿಧ ಧರ್ಮಗಳ ಪೂಜಾ ಸ್ಥಳಗಳು ಭೌತಿಕ ಸಾಮೀಪ್ಯದಲ್ಲಿ ಹೇಗೆ ಸಹಬಾಳ್ವೆ ನಡೆಸುತ್ತವೆ ಎಂಬುದನ್ನು ಎತ್ತಿ ತೋರಿಸಿದರು.
ಮಸೀದಿ ನಿರ್ಮಾಣದ ಸಮಯದಲ್ಲಿ ಕಂಬಗಳು ಸುತ್ತಲೂ ಬಿದ್ದಿರುವುದನ್ನು ಕಾರ್ಮಿಕರು ಕಂಡಿರಬಹುದು ಅಥವಾ ಅವನ್ನು ಮುರಿದು ಮಸೀದಿಗೆ ಬಳಸಿರಬಹುದು ಅಥವಾ ಅವುಗಳನ್ನು ಇತರ ಸ್ಥಳಗಳಿಂದತಂದಿರಬಹುದು ಎಂದು ಅವರು ಹೇಳಿದರು.
ಈ ವಸ್ತುಗಳ ಉಪಸ್ಥಿತಿಯು ಬಾಬರಿ ಮಸೀದಿಯನ್ನು “ಇಸ್ಲಾಮೇತರ ಮಾಡುವುದಿಲ್ಲ ಎಂದು ಧವನ್ ಹೇಳಿದರು.
ಇದೇವೇಳೆ, ಈ ಸಾಮಗ್ರಿಗಳು ಮತ್ತು ಕೆತ್ತನೆಗಳು ಸಾಂಸ್ಕೃತಿಕ ಒಗ್ಗೂಡಿಸುವಿಕೆಯ ಪರಿಣಾಮವಾಗಿದೆ ಎಂಬ ನಿಮ್ಮ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಸಾಕ್ಷಿ ಇದೆಯೇ ಎಂದು ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಕೇಳಿದರು.
ಶ್ರೀ ಧವನ್ ಉತ್ತರಿಸುತ್ತಾ, ನೋಡಲು ಅಸಿಮಿಲೇಷನ್ ಇದೆ. ಹೊರಗೆ ಚಬುತ್ರ ಮತ್ತು ಒಳಗೆ ಮಸೀದಿ ಇದೆ. ಬ್ರಿಟಿಷರು ಶಾಂತಿಗಾಗಿ ಇಬ್ಬರಿಗೂ ಅವಕಾಶ ನೀಡಿದ್ದರು ಎಂದರು.
“ಅಂತಹ ಚಿತ್ರಗಳು ಮತ್ತು ಕೆತ್ತನೆಗಳು ಮಸೀದಿಗಳ ಭಾಗವಾಗಿದ್ದವು ಎಂಬುದಕ್ಕೆ ಪುರಾವೆಗಳಿವೆಯೇ?” ಎಂದು ನ್ಯಾಯಮೂರ್ತಿ ಬೊಬ್ಡೆ ಕೇಳಿದರು.
ರಾಷ್ಟ್ರೀಯ ರಾಜಧಾನಿಯಲ್ಲಿ “ಮಿನಾರ್ ಇರುವ ಕುತುಬ್ ಪ್ರದೇಶದಲ್ಲಿ” ಇಂತಹ ಸಮೀಕರಣದ ಪುರಾವೆಗಳು ಕಂಡುಬರುತ್ತವೆ ಎಂದು ಧವನ್ ಹೇಳಿದರು. ಯಾವುದೇ ಧಾರ್ಮಿಕ ಗ್ರಂಥವು ಭಗವಾನ್ ರಾಮನ ಜನ್ಮ ಸ್ಥಳವನ್ನು ನಿಖರವಾಗಿ ನೀಡುವುದಿಲ್ಲ ಎಂದೂ ಅವರು ಹೇಳಿದರು.
“ಇಂದು, ಅಯೋಧ್ಯೆಯಲ್ಲಿ ಮೂರು ತಾಣಗಳಿವೆ ಎಂದು ಹೇಳಲಾಗಿದೆ. ಡಿಸೆಂಬರ್ 1949 ರಿಂದ ಇದು ರಾಮಂಜನ್ಮಭೂಮಿ. 1857 ರಲ್ಲಿ ಇದು ಹೊರಗಿನ ಅಂಗಳದಲ್ಲಿ ರಾಮ್ ಚಬುತ್ರವಾಗಿತ್ತು. ಆವರಣದ ಹೊರಗಿನ ಜನ್ಮಸ್ಥಾನ್ ಸೈಟ್ ರಸೋಯಿ ಮಂದಿರವನ್ನು ನಿಖರವಾದ ಸ್ಥಳವೆಂದು ಅನಾದಿ ಸಮಯದಿಂದ ಪರಿಗಣಿಸಲಾಗಿದೆ ಎಂದು ಶ್ರೀ ಧವನ್ ಹೇಳಿದರು.
ಕೃಪೆ: ದ ಹಿಂದೂ












