ಉತ್ತರಪ್ರದೇಶ ರೈತರ ಜಾಥಾ ದಿಲ್ಲಿಗೆ: ಬೃಹತ್ ಸಾರಿಗೆ ಅಡಚಣೆ

0
722

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.21: ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಸಾಲ ಮನ್ನಾ ಮಾಡಬೇಕು ಎಂಬಿತ್ಯಾದಿ ಹದಿನೈದು ಬೇಡಿಕೆಗಳನ್ನು ಎತ್ತಿ ಹಿಡಿದು ಉತ್ತರಪ್ರದೇಶ ರೈತರು ದಿಲ್ಲಿಗೆ ಜಾಥಾ ಹೊರಟಿರುವುದು ಸಾರಿಗೆ ಸಂಚಾರಕ್ಕೆ ಬಾಧಕವಾಗಿದೆ.

ಪ್ರತಿಭಟನಾಕಾರರಿಂದಾಗಿ ನೊಯಿಡಾ ಸೆಕ್ಟರ್ 62ರಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ನೊಯಿಡಾ ಪೊಲೀಸರು ಸಾರಿಗೆ ಸಂಚಾರ ಸುಗಮಗೊಳಿಸಲು ರಂಗ ಪ್ರವೇಶಿಸಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ದಿಲ್ಲಿ ಪೊಲೀಸರನ್ನು ಗಡಿಭಾಗದಲ್ಲಿ ವಿನ್ಯಾಸಗೊಳಿಸಲಾಗಿದೆ.

ಟ್ರಾಕ್ಟರ್, ರೈತೋಪಕರಣಗಳೊಂದಿಗೆ ಸೆಪ್ಟಂಬರ್ 17ರಂದು ಉತ್ತರಪ್ರದೇಶದ ಸಹರಾನಪುರದಿಂದ ಆರಂಭಿಸಿದ ಕಿಸಾನ್ ಮಝ್ದೂರ್ ಅಧಿಕಾರ್ ಯಾತ್ರ ಇಂದು ದಿಲ್ಲಿ ಪ್ರವೇಶಿಸಲಿದೆ. ಕಿಸಾನ್ ಘಾಟ್‍ನಲ್ಲಿ ರೈತರು ಪ್ರತಿಭಟನೆಯಲ್ಲಿ ಒಗ್ಗೂಡಲಿದ್ದಾರೆ. ಸಹರಾನ್‌ಪುರ, ಶಂಲಿಯ ಕಬ್ಬು ಬೆಳಗಾರರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.