ಮನ್‍ಮೋಹನ್ ಸಿಂಗ್ ಜನ್ಮದಿನ: ಮೋದಿ ಶುಭಹಾರೈಕೆ

0
482

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.26: ಮಾಜಿ ಪ್ರಧಾನಿ ಡಾ. ಮನ್‍ಮೋಹನ್ ಸಿಂಗ್‌ರವರ 87ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೊದಿ ಶುಭಾಶಯ ಕೋರಿದ್ದಾರೆ. ಮನ್‍ಮೋಹನ್ ಸಿಂಗ್‌ರ ಆಯಸ್ಸು ಮತ್ತು ಆರೋಗ್ಯಕ್ಕೆ ಅವರು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ. ಪ್ರಮುಖ ನಾಯಕರ ಸಹಿತ ಹಲವಾರು ಮಂದಿ ಮನ್‍ಮೋಹನ್ ಸಿಂಗ್‌ ಜನ್ಮದಿನ ಶುಭಾಶಯ ಕೋರಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 1932 ಸೆಪ್ಟಂಬರ್ 26ಕ್ಕೆ ವಿಭಜನೆಯ ಮೊದಲು ಪಂಜಾಬಿನ ಗಾಯಿಯಲ್ಲಿ ಮನ್‍ಮೋಹನ್ ಸಿಂಗ್ ಜನಿಸಿದರು.