ಮಥುರಾ,ಸೆ.26: ನಿಬಿಢ ರಸ್ತೆಯಲ್ಲಿ ಕಾರನ್ನು ಉರಿಸಿ ಘರ್ಷಣೆಯ ಪರಿಸ್ಥಿತಿ ನಿರ್ಮಿಸಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ ಯುವಕ ಮತ್ತು ಜೊತೆಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮಥುರಾದಲ್ಲಿ ಬುಧವಾರ ಸಂಜೆಯ ವೇಳೆ ಈ ಘಟನೆ ನಡೆದಿದೆ. ವಾಹನ ಉರಿಸಿದ್ದಲ್ಲದೇ ಯುವಕ ತನ್ನ ರಿವಾಲ್ವರ್ನಿಂದ ಆಕಾಶಕ್ಕೆ ಗುಂಡು ಹಾರಿಸಿದ್ದಾನೆ.
ರಿಫೈನರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸಿಸುವ ಶುಭಂ ಚೌಧರಿ ಮತ್ತು ಅನಧಿಕೃತವಾಗಿ ತನ್ನಲ್ಲಿಂದ ಕೋವಿಯಿಂದ ಗುಂಡು ಹಾರಿಸಿದ್ದಕ್ಕಾಗಿ ಯುವತಿಯನ್ನು ಪೊಲೀಸರು ಬಂಧಿಸಿದ್ದು ಶುಭಂ ತನ್ನ ಕಾರನ್ನೇ ಉರಿಸಿದ್ದಾನೆಂದು ತಿಳಿದು ಬಂದಿದೆ. ಜೊತೆಗಿದ್ದ ಯುವತಿಯೊಂದಿಗಿನ ಸಂಬಂಧದಿಂದಾಗಿ ನವೆಂಬರಿನಲ್ಲಿ ನಡೆಯಬೇಕಾಗಿದ್ದ ಶುಭಂ ಚೌಧರಿಯ ಮದುವೆ ಮುರಿದು ಬಿದ್ದಿತ್ತು. ನಂತರ ಈತ ತೀವ್ರ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ.












