ಶರದ್ ಪವಾರ್ ವಿರುದ್ಧ ಇಡಿ ಪ್ರಕರಣ ರಾಜಕೀಯ ಪ್ರೇರಿತ- ಅಣ್ಣಾ ಹಝಾರೆ

0
569

ಸನ್ಮಾರ್ಗ ವಾರ್ತೆ

ಮುಂಬೈ,ಸೆ.27:ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಭ್ರಷ್ಟಾಚಾರ ಪ್ರಕರಣದಲ್ಲಿ ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧ ಎಂಫೋರ್ಸ್‍ಮೆಂಟ್ ಡೈರಕ್ಟರೇಟ್(ಇಡಿ) ಕ್ರಮ ಕೈಗೊಂಡಿರುವುದು ರಾಜಕೀಯ ಪ್ರೇರೇತ ಎನ್ನಲಾಗಿದೆ. ಮಹಾರಾಷ್ಟ್ರ ವಿಧಾನಸಭೆಗೆ ದಿನಗಳು ಬಾಕಿಯಿರುವಾಗ ಅನಿರೀಕ್ಷಿತವಾಗಿ ಪವಾರ್ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ.

25000 ಕೋಟಿ ರೂಪಾಯಿ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರು ಮುಂಬೈ ಹೈಕೋರ್ಟಿನಲ್ಲಿ ಹೂಡಿದ ದಾವೆಯಲ್ಲಿ ಹೈಕೋರ್ಟು ತನಿಖೆಗೆ ಆದೇಶ ಹೊರಡಿಸಿತ್ತು. ಮುಂಬೈ ಪೊಲೀಸರ ಇಕಾನಾಮಿಕ್ ಅಫೆನ್ಸ್ ವಿಂಗ್ ಅಜಿತ್ ಪವಾರ ಸಹಿತ ಎಪ್ಪತ್ತು ಜನರ ವಿರುದ್ಧ ಆಗಸ್ಟ್ 23ಕ್ಕೆ ಪ್ರಕರಣ ದಾಖಲಿಸಿತ್ತು.

ಶರದ್ ಪವಾರ್ ವಿರುದ್ಧ ಪ್ರಸ್ತಾವಗಳಿದ್ದರೂ ಪ್ರಕರಣದಲ್ಲಿ ಅವರು ಆರೋಪಿಯಾಗಿರಲಿಲ್ಲ. ಆದರೆ ಕಪ್ಪುಹಣ ಬಿಳಿ ಮಾಡುವುದನ್ನು ತಡೆಯುವ ಪಿಎಂಎಲ್‍ಐ ಕಾನೂನು ಪ್ರಕಾರ ಪವಾರ್ ವಿರುದ್ಧ ಇಡಿ ಕೇಸು ದಾಖಲಿಸಿರುವುದು ಸಂದೇಹ ಕಾರಣವಾಗಿದೆ.

ಚುನಾವಣೆ ಹತ್ತಿರವಾಗಿದ್ದು, ‘ಜೈಲಿಗೆ ಹೋದವರು ತನ್ನನ್ನು ಪ್ರಶ್ನಿಸಬೇಕಾಗಿಲ್ಲ’ ಎಂದು ಅಮಿತ್ ಶಾ ವಿರುದ್ಧ ಪವಾರ್ ಹೇಳಿಕೆ ನೀಡಿದ್ದು ಕೇಸಿಗೆ ಕಾರಣವೆನ್ನಲಾಗುತ್ತಿದೆ. ಒಂದು ವಾರ ಮುಂಚೆ ಸೋಲಾಪುರದ ರ‌್ಯಾಲಿಯಲ್ಲಿ ಅಮಿತ್ ಶಾ ವಿರುದ್ಧ ಪವಾರ್ ಪರೋಕ್ಷ ಹೇಳಿಕೆ ನೀಡಿದ್ದರು. ಇನ್ನೊಂದು ಕಾರಣ ವಿಧಾನಸಭಾ ಚುನಾವಣೆ ಎನ್ನಲಾಗುತ್ತಿದೆ.

ಇದೇ ವೇಳೆ ಅಣ್ಣಾ ಹಝಾರೆ ಪವಾರ್ ಪರ ರಂಗಪ್ರವೇಶಿಸಿದ್ದು, “ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಭ್ರಷ್ಟಾಚಾರದಲ್ಲಿ ಎನ್‍ಸಿಪಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ವಿರುದ್ಧ ಕೇಸು ದಾಖಲಿಸಿದ್ದನ್ನು ಹಝಾರೆ ಪ್ರಶ್ನಿಸಿದ್ದಾರೆ. ಸಹಕಾರಿ ಬ್ಯಾಂಕ್ ಭ್ರಷ್ಟಾಚಾರದ ದಾಖಲೆಗಳಲ್ಲಿ ಪವಾರ್ ಹೆಸರಿಲ್ಲ. ಆದರೆ ಅಜಿತ್ ಪವಾರ್ ಹೆಸರಿದೆ. ಹೆಸರೇ ಇಲ್ಲದ ಒಬ್ಬರನ್ನು ಹೇಗೆ ಎಂಫೋರ್ಸ್‍ಮೆಂಟ್ ಡೈರಕ್ಟರೇಟ್ ಪ್ರಕರಣ ದಾಖಲಿಸಲು ಸಾಧ್ಯ” ಎಂದು ಅವರು ಪ್ರಶ್ನಿಸಿದರು. ಅವರು ರ‌್ಯಾಲಿಗನ್ ಸಿದ್ಧಿಯಲ್ಲಿ ಪತ್ರಿಕಾಗೋಷ್ಠಿ ನೀಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.