ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್,ಸೆ.26: ಪೆಸಿಫಿಕ್ ದ್ವೀಪದ ದೇಶಗಳಿಗೆ ಹಂತಹಂತವಾಗಿ 1065 ಕೋಟಿ ರೂಪಾಯಿ ಸಾಲ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ನ್ಯೂಯಾರ್ಕಿನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಭಾರತ-ಪೆಸಿಫಿಕ್ ದ್ವೀಪ ದೇಶಗಳ ನಾಯಕರ ಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ಒಪ್ಪಂದವಾಗಿದೆ.
ಮೊದಲ ಹಂತದಲ್ಲಿ ಪ್ರತಿಯೊಂದು ದೇಶಗಳಿಗೆ ಏಳು ಕೋಟಿ ರೂಪಾಯಿಯಂತೆ ನೀಡಲಾಗುವುದು. ಒಟ್ಟು ಎಂಬತ್ತೈದು ಕೋಟಿ ರೂಪಾಯಿ ಪ್ರತಿಯೊಂದು ದೇಶಗಳಿಗೆ ಲಭಿಸಲಿದೆ. ಫಿಜಿ, ಕರಿಬಾಸ್, ಮಾರ್ಶಲ್ ಐಲ್ಯಾಂಡ್, ನೌರು, ಪಾಪುವ ಗಿನಿ, ಸಮೊವ, ಸೊಲಮನ್ ಐಲ್ಯಾಂಡ್, ವನ್ವಾತು, ಪಲಾವು ಮೊದಲಾದ ದೇಶಗಳಿಗೆ ಭಾರತ ಸಾಲದ ನೆರವು ನೀಡಲಿದೆ.












