ಶರದ್ ಪವಾರ್‌ ಬೆಂಬಲಕ್ಕೆ ನಿಂತ ಶಿವಸೇನೆ, ಕಾಂಗ್ರೆಸ್

0
694

ಸನ್ಮಾರ್ಗ ವಾರ್ತೆ

ಮುಂಬೈ:ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್‌ನನ್ನು ಎಂಫೋರ್ಸ್‍ಮೆಂಟ್ ಡೈರಕ್ಟರೇಟ್ ಪ್ರಶ್ನಿಸಲು ಸಜ್ಜಾಗಿದ್ದು ಶರದ್ ಪವಾರ್‍‌ರಿಗೆ ಕಾಂಗ್ರೆಸ್ ಮತ್ತು ಶಿವಸೇನೆ ಬೆಂಬಲ ಸೂಚಿಸಿದೆ. “ಶರದ್ ಪವಾರ್ ವಿರುದ್ಧ ಆರೋಪಗಳನ್ನು ಜನರು ನಂಬುವುದಿಲ್ಲ” ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದರು. ‘ಪವಾರ್ ವಿರುದ್ಧ ಸಾಕ್ಷ್ಯಗಳಿಲ್ಲ’ ಎಂದೂ ಅವರು ಹೇಳಿದರು.

ರಾಜಕೀಯ ಪ್ರೇರಿತವಾಗಿ ಪವಾರ್ ವಿರುದ್ಧ ಇಡಿ ಕೇಸು ದಾಖಲಿಸಿಕೊಂಡಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಕೇಂದ್ರ ಸರಕಾರ ಪ್ರತೀಕಾರ ಕ್ರಮದ ಭಾಗವಾಗಿ ಪವಾರ್ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟು ಬಿಜೆಪಿ ಸರಕಾರ ಅವರ ವಿರುದ್ಧ ಕ್ರಮಕ್ಕೆ ಹೊರಟಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಇದೇ ವೇಳೆ, ಪವಾರ್ ಇಡಿ ಕಚೇರಿ ಮುಂದೆ ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ ಹಾಜರಾಗುವುದಾಗಿ ಹೇಳಿದ್ದರು. ಆದರೆ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದ್ದು ಇಡಿ ಕಚೇರಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಪವಾರ್ ವಸತಿಯ ಮುಂದೆ ಹಾಗೂ ಇಡಿ ಕಚೇರಿ ಮುಂದೆ ಭಾರೀ ಪೊಲೀಸು ಬಂದೊಬಸ್ತು ಏರ್ಪಡಿಸಲಾಗಿದೆ. ಇದೇ ವೇಳೆ, ಇಡಿ ಪವಾರ್‍‌ರಿಗೆ ಈಗ ವಿಚಾರಣೆಯ ಅಗತ್ಯವಿಲ್ಲ ಅಗತ್ಯತೆ ಇದ್ದಾಗ ತಿಳಿಸುತ್ತೇವೆ ಎಂದು ತಿಳಿಸಿದೆ.