ಉಗ್ರರ ಪಟ್ಟಿಯಲ್ಲಿರುವ 130 ವ್ಯಕ್ತಿಗಳು ಪಾಕಿಸ್ತಾನದಲ್ಲಿಲ್ಲ ಎಂದು ಹೇಳಲು ಇಮ್ರಾನ್‍ ಖಾನ್‌ರಿಗೆ ಸಾಧ್ಯವೇ?- ಭಾರತ ಪ್ರಶ್ನೆ

0
493

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಸೆ.28: ವಿಶ್ವಸಂಸ್ಥೆಯ ಪಟ್ಟಿಯಲ್ಲಿರುವ 130 ಉಗ್ರರು ಪಾಕಿಸ್ತಾನದಲ್ಲಿಲ್ಲ ಎಂದು ದೃಢಪಡಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ರಿಗೆ ಸಾಧ್ಯವೇ ಎಂದು ಭಾರತ ಪ್ರಶ್ನಿಸಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ವಿದೇಶ ಸಚಿವಾಲಯ ಕಾರ್ಯದರ್ಶಿ ವಿದಿಶಾ ಮೈತ್ರ ಪಾಕಿಸ್ತಾನವನ್ನು ಬಲವಾಗಿ ಟೀಕಿಸಿ ರಂಗಪ್ರವೇಶಿಸಿದ್ದಾರೆ.

ಭಯೋತ್ಪಾದಕರಿಗೆ ನಿವೃತ್ತಿ ವೇತನ ನೀಡುವ ಸರಕಾರ ಪಾಕಿಸ್ತಾನದ್ದಾಗಿದೆ. ಇಮ್ರಾನ್ ಖಾನ್ ಭಯೋತಾದಕರನ್ನು ಸಮರ್ಥಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೈತ್ರ ಆರೋಪಿಸಿದ್ದಾರೆ.

ಉಸಾಮಾ ಬಿನ್ ಲಾದೆನ್‍ವರೆಗೂ ಸಮರ್ಥಿಸುವ ವ್ಯಕ್ತಿ ಇಮ್ರಾನ್ ಖಾನ್ ಆಗಿದ್ದಾರೆ. ಕಾಶ್ಮೀರದ ಅಭಿವೃದ್ಧಿ ಕಾರ್ಯಗಳೊಂದಿಗೆ ಭಾರತ ಮುಂದೆ ಹೋಗುತ್ತಿದೆ ಎಂದು ಮೈತ್ರ ಹೇಳಿದರು. ಕಳೆದ ದಿವಸ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್‍ರ ಭಾಷಣಕ್ಕೆ ಅವರು ಉತ್ತರ ನೀಡುತ್ತಿದ್ದರು. ಆರ್ಟಿಕಲ್ 370 ರದ್ದತಿ ಭಾರತದ ತೀರ್ಮಾನವು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಇಮ್ರಾನ್ ಆರೋಪಿಸಿದ್ದಾರೆ. ಆಗಸ್ಟ್ ಐದರ ನಂತರ ಕಾಶ್ಮೀರ ಬಂದಿಖಾನೆಯಾಗಿದೆ. 7000 ಮಕ್ಕಳನ್ನು ಸೇನೆ ಹಿಡಿದಿರಿಸಿದೆ ಎಂದು ಇಮ್ರಾನ್ ಹೇಳಿದ್ದರು.