ಚಿನ್ಮಯಾನಂದ ವಿರುದ್ಧ ಪ್ರತಿಭಟನೆಗೆ ಅನುಮತಿ ನಿರಾಕರಣೆ: ಕಾಂಗ್ರೆಸ್ ನಾಯಕರು ವಶಕ್ಕೆ

0
618

ಸನ್ಮಾರ್ಗ ವಾರ್ತೆ

ಲಕ್ನೊ,ಸೆ.30:ಬಿಜೆಪಿ ನಾಯಕ ಚಿನ್ಮಯಾನಂದನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಕಾನೂನು ವಿದ್ಯಾರ್ಥಿಯನ್ನು ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಉತ್ತರಪ್ರದೇಶ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಪ್ರತಿಭಟನಾಕಾರರಿಗೆ ನೇತೃತ್ವ ನೀಡಿದ್ದ ಕಾಂಗ್ರೆಸ್ ನಾಯಕರಾದ ಜಿತಿನ್ ಪ್ರಸಾದ್ ಸಹಿತ ಹಲವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಮೂವರನ್ನು ವಶಕ್ಕೆ ಪಡೆಯಲಾಗಿದೆ. ಶಾಜಹಾನ್ ಪುರದ ರಸ್ತೆಯಲ್ಲಿ ಪೊಲೀಸರು ತಾತ್ಕಾಲಿಕ ತಡೆ ನಿರ್ಮಿಸಿದ್ದಾರೆ. ಶಾಜಹಾನ್‍ಪುರದಿಂದ ಲಕ್ನೊಕ್ಕೆ ಮಾರ್ಚ್ ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಪೊಲೀಸರು ಅನುಮತಿ ನಿರಕಾರಿಸಿದ್ದಾರೆ.

ಬ್ಲಾಕ್ ಮೈಲ್ ಮಾಡಿ ಹಣ ಕೀಳಲು ಯತ್ನಿಸಿದ್ದಾಳೆ ಎಂದು ವಿದ್ಯಾರ್ಥಿನಿಯ ವಿರುದ್ಧ ಚಿನ್ಮಯಾನಂದ ದೂರಿನಾಧಾರದಲ್ಲಿ ಕಳೆದ ವಾರ ಪೊಲೀಸರು ಅವಳನ್ನು ಬಂಧಿಸಿದ್ದಾರೆ. ಯುವತಿಯ ಮನೆಗೆ ನುಗ್ಗಿ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ ಎಂದು ವಿದ್ಯಾರ್ಥಿನಿಯ ಮನೆಯವರು ಆರೋಪಿಸಿದ್ದಾರೆ.

ಚಿನ್ಮಯಾನಂದರ ಕಾಲೇಜಿನಲ್ಲಿ ಕಲಿಯುತ್ತಿದ್ದ ಕಾನೂನು ವಿದ್ಯಾರ್ಥಿನಿ ಒಂದು ವರ್ಷದವರೆಗೆ ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರವ್ಯೆಸಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸ್ವತಃ ಬಹಿರಂಗಗೊಳಿಸಿದ್ದಳು. ವಿದ್ಯಾರ್ಥಿನಿಯ ದೂರಿನಲ್ಲಿ ಸುಪ್ರೀಂಕೋರ್ಟು ಆದೇಶದಂತೆ ವಿಶೇಷ ತನಿಖಾ ತಂಡ ಚಿನ್ಮಯಾನಂದರ ವಿರುದ್ಧ ಕೇಸು ದಾಖಲಿಸಿ ಬಂಧಿಸಿದೆ.