ಸನ್ಮಾರ್ಗ ವಾರ್ತೆ
ಚೆನ್ನೈ,ಅ.10: ಅಣ್ಣಾ ಡಿಎಂಕೆ ಬ್ಯಾನರ್ ಬಿದ್ದು ಸ್ಕೂಟರ್ನಲ್ಲಿ ಹೋಗುತ್ತಿದ್ದ ಯುವತಿ ಮೃತಪಟ್ಟಿರುವ ಘಟನೆಯಲ್ಲಿ ತಮಿಳುನಾಡು ಸರಕಾರದಿಂದ ಒಂದು ಕೋಟಿ ರೂಪಾಯಿ ನಷ್ಟ ಪರಿಹಾರಕ್ಕೆ ಯುವತಿಯ ತಂದೆ ಮದ್ರಾಸ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸೆಪ್ಟಂಬರ್ ಹನ್ನೆರಡರಂದು ಬಿಟೆಕ್ ಪದವೀಧರೆ ಶುಭ ಶ್ರೀ(23) ಅಣ್ಣಾ ಡಿಎಂಕೆಯ ಬ್ಯಾನರ್ ಬಿದ್ದು ಮೃತಪಟ್ಟಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದಾಗ ಬೃಹತ್ ಹೋರ್ಡಿಂಗ್ ಶುಭ ಶ್ರೀಯ ಮೇಲೆ ಬಿದ್ದಿತ್ತು.
ಸ್ಕೂಟರಿನಿಂದ ಎಸೆಯಲ್ಪಟ್ಟ ಶುಭಶ್ರೀ ಹಿಂಬದಿಯಿಂದ ಬರುತ್ತಿದ್ದ ಟ್ಯಾಂಕರಿನಡಿಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಪ್ರಕರಣ ಹೈಕೋರ್ಟಿನ ಮುಂದಿರುವ ವೇಳೆ ತಂದೆ ನಷ್ಟಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.












