ಉಪಕುಲಪತಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಜಾಮಿಯ ಮಿಲ್ಲಿಯ ವಿದ್ಯಾರ್ಥಿಗಳ ಮೇಲೆ ಹಲ್ಲೆ -ವೀಡಿಯೊ

0
515

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.23: ಜಾಮಿಯ ಮಿಲ್ಲಿಯ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಉಪಕುಲಪತಿಯನ್ನು ಬೆಂಬಲಿಸುವ ತಂಡವೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಇಸ್ರೇಲಿನೊಂದಿಗೆ ಸಹಕರಿಸಿ ಕ್ಯಾಂಪಸ್ ಕಾರ್ಯಕ್ರಮ ಇಟ್ಟುಕೊಂಡದ್ದನ್ನು ಪ್ರತಿಭಟಿಸಿದ ಐವರು ವಿದ್ಯಾರ್ಥಿಗಳನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು. ಇವರ ಅಮಾನತು ರದ್ದುಗೊಳಿಸಿ ಪುನಃ ಕ್ಲಾಸಿಗೆ ಪ್ರವೇಶ ನೀಡಬೇಕೆಂದು ಉಪಕುಲಪತಿಗಳ ವಸತಿಯ ಮುಂಭಾಗದಲ್ಲಿ ಒಟ್ಟುಗೂಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.

ಅಲ್ಲಿಗೆ ಬಂದ ತಂಡವೊಂದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ. ಕಲ್ಲು, ಲಾಠಿಗಳಿಂದ ಹೊಡೆದಿದೆ. ವಿದ್ಯಾರ್ಥಿನಿಯರ ಸಹಿತ ಹಲವರು ಗಾಯಗೊಂಡಿದ್ದಾರೆ. ಹಲವು ದಿವಸಗಳಿಂದ ಅಮಾನತುಗೊಂಡಿರುವ ವಿದ್ಯಾರ್ಥಿಗಳ ಅಮಾನತು ರದ್ದು ಪಡಿಸಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.

ಆದರೆ, ವಿಶ್ವವಿದ್ಯಾನಿಲಯದ ಅಧಿಕಾರಿಗಳ ಕಡೆಯಿಂದ ಹೋರಾಟ ನಿಲ್ಲಿಸುವುದಕ್ಕೆ ಯಾವ ಮಾತುಕತೆಯೂ ನಡೆದಿರಲಿಲ್ಲ. ಆದ್ದರಿಂದ ಮಂಗಳವಾರ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಕುಲಪತಿಗಳ ವಸತಿಗೆ ದಿಗ್ಬಂಧನ ಹಾಕಿದ್ದರು.