ಆರ್‌ಎಸ್‌ಎಸ್ ಎಲ್‍ಡಿಎಫ್‍ಗೆ ವೋಟು ಹಾಕಿಸಿದೆ- ಕೆ. ಮುರಳೀಧರನ್

0
634

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ: ಚುನಾವಣೆಯಲ್ಲಿ ಆರೆಸ್ಸೆಸ್, ಎಲ್‍ಡಿಎಫ್‍ಗೆ ಮತ ಹಾಕಿಸಿದೆ ಎಂದು ಸಂಸದ ಕೆ.ಮುರಳೀಧರನ್ ಹೇಳಿದ್ದಾರೆ.

ಜಾತಿ-ಸಮುದಾಯದ ಮತಗಳು ಕಾಂಗ್ರೆಸ್ಸಿಗೆ ಲಭಿಸಿಲ್ಲ. ಕಡಕಂಪ್ಪಳ್ಳಿ ಸುರೇಂದ್ರನ್ ಹಲವು ಈಯವ ಕುಟುಂಬಗಳಿಗೆ ಹೋಗಿ ಜಾತಿಯ ಹೆಸರಿನಲ್ಲಿ ವೋಟು ಕೇಳಿದ್ದಾರೆ. ಆರೆಸ್ಸೆಸ್ಸಿಗರು ಸಂಘಟಿತವಾಗಿ ಎಲ್‍ಡಿಎಫ್‍ಗೆ ಮತಹಾಕಿಸಿದರು. ವಿಶ್ವಾಸದ ವಿಷಯದಲ್ಲಿ ಸರಿಯಾದ ನಿಲುವು ತಳೆದದ್ದರಿಂದ ಎನ್‍ಎಸ್‍ಎಸ್ ಯುಡಿಎಅನ್ನು ಬೆಂಬಲಿಸಿದರು ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಎನ್‍ಎಸ್‍ಎಸ್‍ನ ಜಾತ್ಯತೀತ ನಿಲುವು ಆರೆಸ್ಸೆಸ್‍ಗೆ ಕೋಪ ತರಿಸಿದೆ. ಪ್ರಗತಿಪರತೆ ಮಾತಾಡುವ ಎಡಪಕ್ಷಗಳು ಎನ್‍ಎಸ್‌ಎಸ್‌ಅನ್ನು ಟೀಕಿಸಿ ಆರೆಸ್ಸೆಸ್‍ಗೆ ಆತುಕೊಂಡಿತು ಎಂದು ಕೆ.ಮುರಳೀಧರನ್ ಆರೋಪಿಸಿದರು.

ಇದೇವೇಳೆ, ಯುಡಿಎಫ್‍ನ ಪರಂಪರಾಗತ ಮತದಾರರಲ್ಲಿ ಮನಪರಿವರ್ತನೆ ಆಗಿದೆ. ಇದರಲ್ಲಿ ಮುಂದೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಿದೆ. ಆದರೆ ಬೆಂಬಲಿಸಿದವರನ್ನು ನಿಂದಿಸುವುದು ಕಾಂಗ್ರೆಸ್ಸಿನ ನೀತಿಯಲ್ಲ. ಪಾರ್ಟಿಯ ಆಂತರಿಕ ಸಮಸ್ಯೆ ಚುನಾವಣೆಯಲ್ಲಿ ಪ್ರತಿಫಲನವಾಗಿಲ್ಲ ಎಂದು ಸಂಸದರು ಹೇಳಿದರು.