ಕಾಂಗ್ರೆಸ್-ಎನ್‍ಸಿಪಿ ಸಖ್ಯ!- ಊಹಪೋಹಗಳಿಗೆ ಅವಕಾಶ ಕಲ್ಪಿಸಿದ ಶಿವಸೇನಾ ನಾಯಕನ ಕಾರ್ಟೂನ್

0
864

ಸನ್ಮಾರ್ಗ ವಾರ್ತೆ

ಮುಂಬೈ,ಅ.26: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಬಹುಮತ ಗಳಿಸುವ ಬಿಜೆಪಿ ಇರಾದೆ ವಿಫಲವಾಗಿದ್ದು ಪಾರ್ಟಿಯಲ್ಲಿ ಒತ್ತಡ ಸೃಷ್ಟಿಸುವ ರೀತಿಯ ಕಾರ್ಟೂನನನ್ನು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಹಿರಿಯ ನಾಯಕ ಸಂಜಯ್ ರಾವುತ್ ಪೋಸ್ಟ್ ಮಾಡಿದ್ದಾರೆ.

ಕಾರ್ಟೂನ್‍ನಲ್ಲಿ ಎನ್‍ಸಿಪಿ ಚಿಹ್ನೆಯಾದ ಟೈಂಪೀಸ್ ಕೊರಳಿಗೆ ಹಾಕಿ ಶಿವಸೇನೆಯ ಹುಲಿ ಬಿಜೆಪಿ ಚಿಹ್ನೆ ತಾವರೆಯ ಸುವಾಸನೆ ನೋಡುತ್ತಿದೆ. ವ್ಯಂಗ್ಯವಾಗಿದ್ದರೂ ಮತ ಎಣಿಕೆಯ ಬಳಿಕ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಚವಾಣ್ ನೀಡಿದ ಹೇಳಿಕೆಗೆ ಹೋಲಿಸಿ ನೋಡಬಹುದಾದ ರೀತಿಯಲ್ಲಿ ಕಾರ್ಟೂನ್ ಇದೆ. ಕಾರ್ಟೂನಿಗೆ ಗಮನಿಸಬೇಕಾದ “ದೀಪಾವಳಿ ಅಲ್ವೇ” ಎಂದು ರಾವುತ್ ಶೀರ್ಷಿಕೆ ನೀಡಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹೈಕಮಾಂಡಿನಿಂದ ಚಿಂತನೆ ಆಗಲಿ ಎಂದು ಚೌಹಾನ್ ಹೇಳಿದ್ದರು. ಸಾಮ್ನಾದಲ್ಲಿ ಅಹಂಕಾರದಿಂದ ಹಾರಾಡಿದವರಿಗೆ ಪ್ರಹಾರ ಇದು ಎಂದು ಬಿಜೆಪಿಯ ಕುರಿತು ಬಹಿರಂಗವಾಗಿ ಸಾಮ್ನಾ ಶುಕ್ರವಾರದ ಸಂಪಾದಕೀಯ ಬರೆದಿತ್ತು.

200 ಸೀಟುಗಳ ಗುರಿಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಹಾಜನಾದೇಶ ಯಾತ್ರೆ ಮಾಡಿದರೂ ಮಹಾಜನ ತೀರ್ಪು ಸಿಕ್ಕಿಲ್ಲ ಎಂದು ಸಂಪಾದಕೀಯ ಕುಟುಕಿದೆ. ಪ್ರತಿಪಕ್ಷವನ್ನು ವಿಭಜಿಸಿ ಅವರ ನಾಯಕರನ್ನು ದಮನಿಸಿ ಗೆಲ್ಲುವ ತಂತ್ರವನ್ನು ಜನರು ತಿರಸ್ಕರಿಸಿದರು. ಪ್ರತಿಪಕ್ಷವನ್ನು ನಿರ್ಮೂಲಿಸುವುದು ರಾಜಕೀಯದಲ್ಲಿ ಸಾಧ್ಯವಿಲ್ಲ ಎಂದು ಫಲಿತಾಂಶ ತಿಳಿಸಿಕೊಡುತ್ತಿದೆ.

ಪವಾರ್‌ರ ಕಥೆ ಮುಗಿಯಿತು ಎಂದು ಅನಿಸುವಂತೆ ನಾಯಕರನ್ನು ಎತ್ತಿಕೊಂಡರು. ಪವಾರ್‌ರಿಗಿಂತ ದೊಡ್ಡ ಕುಸ್ತಿ ಪಟು ತಾನೆಂದು ಫಡ್ನವಿಸ್ ಹೇಳಿದರು. ಕೊನೆಗೆ ಜನರು ತೀರ್ಪು ಬರೆದರು. ದೊಡ್ಡ ಕುಸ್ತಿಪಟು ಪವಾರ್‌ರವರೇ ಆಗಿದ್ದಾರೆ. ಸತಾರಾದ ಉದಯನ್‍ರಾಜೆ ಭೋಸ್ಲೆಯನ್ನು ಬಲೆಗೆ ಹಾಕಿ ಶಿವಾಜಿಯ ಆಶೀರ್ವಾದ ತಮಗಿದೆ ಎಂದು ಬಿಜೆಪಿ ಹೇಳಿತು. ಆದರೆ ಅಧಿಕಾರ ವ್ಯಾಮೋಹಿಗಳನ್ನು ಮರಾಠರು ಸಹಿಸುವುದಿಲ್ಲ ಎಂದು ಚುನಾವಣೆ ತೋರಿಸಿ ಕೊಟ್ಟಿದೆ ಎಂಬುದಾಗಿ ಸಂಪಾದಕೀಯದಲ್ಲಿ ಸಾಮ್ನಾ ಬರೆದಿದೆ.