ಸನ್ಮಾರ್ಗ ವಾರ್ತೆ
ಕೇರಳ,ಅ.26: ಮೊನ್ನೆ ನಡೆದ ಯುವ ಲೀಗ್ ಕಾರ್ಯಕರ್ತ ಇಸ್ಹಾಕ್ ಎಂಬುವವರ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಸಿಪಿಎಂನ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದ್ದು ಮುಹೀಸ್, ಮಸೂದ್, ತಾಹಾ ಬಂಧಿತ ಕೊಲೆ ಆರೋಪಿಗಳಾಗಿದ್ದಾರೆ.
ಡಿವೈಎಫ್ಐ ಕರಾವಳಿ ವಲಯ ಕಾರ್ಯದರ್ಶಿ ಕೆ.ಪಿ. ಶಂಸುರಿಗೆ ಹಲ್ಲೆ ಮಾಡಿದ ದ್ವೇಷದಲ್ಲಿ ಇಸ್ಹಾಕ್ರನ್ನು ಆರೋಪಿಗಳು ಕಡಿದು ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಮೂವರು ಆರೋಪಿಗಳು ಘಟನೆಗೆ ಸಂಬಂಧಿಸಿ ಬಂಧಿಸಬೇಕಾಗಿದ್ದು, ಆರು ಮಂದಿಯನ್ನು ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಆರೋಪಿಗಳನ್ನು ಪರಪ್ಪನಂಗಾಡಿ ಕೋರ್ಟಿಗೆ ಇಂದು ಹಾಜರು ಪಡಿಸಲಾಗುವುದು. ಈ ಹಿಂದೆ ಸಿಪಿಎಂ, ಲೀಗ್ ಘರ್ಷಣೆ ನಡೆಯುತ್ತಿದ್ದ ಸ್ಥಳ ಸಂಪೂರ್ಣ ಶಾಂತವಾದ ಬಳಿಕ ಗುರುವಾರ ರಾತ್ರೆ 7:15ಕ್ಕೆ ಕೊಲೆ ನಡೆದಿತ್ತು. ಮನೆಯ ಹತ್ತಿರದ ಮಸೀದಿಗೆ ಇಸ್ಹಾಕ್ ತೆರಳುತ್ತಿದ್ದಾಗ ಆರೋಪಿಗಳು ಕಡಿದು ಹಾಕಿದ್ದರು. ಇಸ್ಹಾಕ್ರ ಬೊಬ್ಬೆ ಕೇಳಿ ಓಡಿ ಬಂದ ಊರವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ.












