ಸನ್ಮಾರ್ಗ ವಾರ್ತೆ
ಕೋಯಮತ್ತೂರ್,ಅ.26: ತಿರುಚ್ಚಿಯಲ್ಲಿ ಕೊಳವೆ ಬಾವಿಗೆ ಎರಡು ವರ್ಷದ ಗಂಡು ಮಗು ಬಿದ್ದಿದ್ದು ಮಗುವನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಶುಕ್ರವಾರ ಸಂಜೆ ಐದೂವರೆ ಗಂಟೆಗೆ ಮನೆಯ ಸಮೀಪ ಆಡುತ್ತಿದ್ದ ರೆಕ್ಟೋ ಆರೋಗ್ಯರಾಜ್-ಕಲಾರಾಣಿ ದಂಪತಿಯ ಪುತ್ರ ಸುಜಿತ್ ವಿಲ್ಸನ್ ಉಪಯೋಗಿಸದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಕೊಳವೆ ಬಾವಿಯ 26 ಅಡಿ ಆಳದಲ್ಲಿ ಮಗು ಸಿಲುಕಿಕೊಂಡಿತ್ತು. ಕ್ಯಾಮರದ ಮೂಲಕ ಇದು ಕಂಡು ಬಂದಿತ್ತು.
ಕೊಳೆವೆ ಬಾವಿಯ ಸಮೀಪ ಗುಂಡಿ ತೋಡಿ ಮಗುವನ್ನು ರಕ್ಷಿಸುವ ಶ್ರಮ ರಾತ್ರೆಯಿಡೀ ಮಾಡಲಾಗಿದೆ. ಹತ್ತು ಅಡಿ ಕೆಳಗೆ ಬಂಡೆ ಕಲ್ಲು ಸಿಕ್ಕಿದೆ. ಆದ್ದರಿಂದ ಮಗುವನ್ನು ಹೊರತರಲು ಅತ್ಯಾಧುನಿಕ ಯಂತ್ರ ಇರುವ ತಂಡವೊಂದು ಮಧುರೆಯಿಂದ ಬಂದಿದೆ. ಈ ಪ್ರಯತ್ನ ನಡೆದಾಗ 26 ಅಡಿಯಲ್ಲಿದ್ದ ಮಗು 68 ಅಡಿಕೆಳಗೆ ಬಿತ್ತು. ರೆವೆನ್ಯು ಇಲಾಖೆ, ಪೊಲೀಸರು, ಅಗ್ನಿಶಾಮಕ ದಳ, ಊರವರು ಸೇರಿ ಮಗುವನ್ನು ರಕ್ಷಿಸುವ ಯತ್ನವನ್ನು ಮುಂದುವರಿಸಿದ್ದಾರೆ.












