ಸನ್ಮಾರ್ಗ ವಾರ್ತೆ
ಶ್ರೀನಗರ,ಅ.26: ಕಾಶ್ಮೀರದ 370ನೆ ವಿಧಿ ತೆರವುಗೊಳಿಸಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ. 307 ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ನಲ್ಲಿ 81 ಸ್ಥಾನಗಳು ಮಾತ್ರ ಬಿಜೆಪಿಗೆ ಸಿಕ್ಕಿದೆ. 307 ಬ್ಲಾಕ್ಗಳಲ್ಲಿ 217 ಬ್ಲಾಕ್ಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ. ರಾಜಕೀಯ ಪಾರ್ಟಿಗಳು ಚುನಾವಣೆಯನ್ನು ಬಹಿಷ್ಕರಿಸಿತ್ತು. ಬಿಜೆಪಿ ಹೊರತಾಗಿ ಜಮ್ಮು ಆಂಡ್ ಕಾಶ್ಮೀರ ನ್ಯಾಶನಲ್ ಪಾಂಥರ್ಸ್ ಪಾಟಿ ಮಾತ್ರ ಸ್ಪರ್ಧೆಯಲ್ಲಿತ್ತು. ಪ್ಯಾಂಥಸ್ಗೆ ಉಧಂಪುರ ಜಿಲ್ಲೆಯಲ್ಲಿ ಎಂಟು ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿದೆ. ಗೆದ್ದ ಪಕ್ಷೇತರರನ್ನು ಹಲವು ರಾಜಕೀಯ ಪಾರ್ಟಿಗಳು ಹೊರಗಿನಿಂದ ಬೆಂಬಲಿಸಿವೆ.
ಹಿಂದೂ ಮತದಾರರ ಪ್ರಭಾವ ಇರುವ ಜಮ್ಮುವಿನ 148 ಸೀಟುಗಳಲ್ಲಿ ಬಿಜೆಪಿಗೆ 52 ಸೀಟುಗಳು ಮಾತ್ರ ಸಿಕ್ಕಿವೆ. ಲಡಾಕ್ನಲ್ಲಿ ಹನ್ನೊಂದು ಸ್ಥಾನಗಳು ಮಾತ್ರ ಸಿಕ್ಕಿವೆ. ಕಾಶ್ಮೀರದಲ್ಲಿ 109 ಪಕ್ಷೇತರರು ಗೆದ್ದಿದ್ದಾರೆ. ಜಮ್ಮು-88 , ಲಡಾಕ್ 20 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಎಂಟು ಕಡೆ ಬಿಜೆಪಿಗೆ ಗೆದ್ದಿದೆ. ಜಮ್ಮು ವಿಭಾಗದಲ್ಲಿ ಜಮ್ಮು, ಕಥುವಾ ಜಿಲ್ಲೆಗಳಲ್ಲಿ ಬಿಜೆಪಿಗೆ ಗೆಲುವು ಲಭಿಸಿತು. ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಪಾಂಥರ್ಸ್ ಪಾರ್ಟಿ ಎಂಟು ಕಡೆ ಮಾತ್ರ ಗೆದ್ದಿತು.
ಪ್ರಮುಖ ಪಕ್ಷಗಳಾದ ಎನ್ಸಿಪಿ, ಪಿಡಿಪಿ, ಕಾಂಗ್ರೆಸ್ ಚುನಾವಣೆ ಬಹಿಷ್ಕರಿಸಿತ್ತು. ಆದ್ದರಿಂದ ಪಕ್ಷೇತರರು ಮತ್ತು ಬಿಜೆಪಿಯ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಶೇ. 98ರಷ್ಟು ಗ್ರಾಮ ಘಟಕಗಳು ಚುನಾವಣೆಯಲ್ಲಿ ಭಾಗವಹಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












