ಸನ್ಮಾರ್ಗ ವಾರ್ತೆ
ಮಿರ್ಝಾಪುರ,ಅ.31:ಉತ್ತರ ಪ್ರದೇಶದಲ್ಲಿ ದನ ಸತ್ತದ್ದಕ್ಕಾಗಿ ಸೃಷ್ಟಿಯಾದ ಜಗಳದಲ್ಲಿ ಓರ್ವ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.ಉತ್ತರಪ್ರದೇಶದ ಮಿರ್ಝಾಪುರದ ವಿಂದ್ಯಾಚಲದಲ್ಲಿ 65 ವರ್ಷದ ಬಿ ಬಿಂದ್ ದನ ಸಾಕಿದ್ದರು. ದನವು ಸತ್ತ ಕುರಿತು ಆರಂಭವಾದ ಜಗಳದಲ್ಲಿ ಅವರೇ ಮೃತಪಟ್ಟಿದ್ದಾರೆ.
ದನ ಸತ್ತ ಕುರಿತು ಬಿಂದ್ ಮತ್ತು ಕುಟುಂಬದ ನಡುವೆಯೇ ಜಗಳ ನಡೆದಿತ್ತು. ಜಗಳದಲ್ಲಿ ಬೇರೆಯವರು ಬಂದು ಸೇರಿಕೊಂಡಾಗ ಉದ್ವಿಗ್ನವಾಗಿತ್ತು. ಬಿಂದ್ ಸಹಿತ ಹೊಡೆದಾಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಐವರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಬಿಂದ್ ಗಂಭೀರ ಗಾಯಗೊಂಡಿದ್ದರು. ಅವರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು. ಘಟನೆಗೆ ಸಂಬಂಧಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.












