ಇಮ್ರಾನ್ ಖಾನ್ ರಾಜೀನಾಮೆಗೆ ಒತ್ತಾಯಿಸಿ ಪಾಕಿಸ್ತಾನದಲ್ಲಿ ಬೃಹತ್ ರ‌್ಯಾಲಿ!

0
891

ಸನ್ಮಾರ್ಗ ವಾರ್ತೆ

ಇಸ್ಲಾಮಾಬಾದ್,ನ.1: ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್‍ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಬೃಹತ್ ರ‌್ಯಾಲಿ ನಡೆದಿದೆ. ಇಮ್ರಾನ್ ಖಾನ್ ದುರ್ಬಲ ಪ್ರಧಾನಿ, ಅರ್ಥವ್ಯವಸ್ಥೆ ವೈಫಲ್ಯ ಮತ್ತು ಭ್ರಷ್ಟಾಚಾರ ಆರೋಪವನ್ನು ಹೊರಿಸಿ ಜನರು ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

ಜಮೀಯತ್ತುಲ್ ಉಲೇಮಾ ಇಸ್ಲಾಮ್-ಎಫ್(ಜೆಯುಐಎಫ್) ರ‌್ಯಾಲಿ ಅಯೋಜಿಸಿದ್ದು ಮೌಲಾನ ಫಝ್ಲುರ್ರಹ್ಮಾನ್, ಇಮ್ರನ್ ಖಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಲಾಹೋರಿನ ಯತೀಂ ಖಾನಾ ಚೌಕದಲ್ಲಿ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು. ಕರಾಚಿಯಿಂದ ಇಸ್ಲಾಮಾಬಾದ್‍ವರೆಗಿನ ಜನರ ಬೇಡಿಕೆ ಇಮ್ರಾನ್ ಖಾನ್ ರಾಜೀನಾಮೆ ನೀಡುವುದು ಎಂದು ಅವರು ಹೇಳಿದರು.

ಇಮ್ರಾನ್ ಖಾನ್‍ರ ಬಳಿ ಈಗಲೂ ಗೌರವಯುತವಾಗಿ ತಮ್ಮ ರಾಜೀನಾಮೆ ನೀಡುವ ಅವಕಾಶ ಇದೆ. ಹೀಗೆಯೇ ಮುಂದುವರಿಯಲು ಜನರು ಅವರಿಗೆ ಇನ್ನಷ್ಟು ಸಮಯ ಅವಕಾಶ ನೀಡಲಾರರು ಎಂದು ಪಝ್ಲುರ್ರಹ್ಮಾನ್ ಗುಡುಗಿದರು.