ಪೆಹ್ಲೂಖಾನ್, ಪುತ್ರರ ಗೋಸಾಗಾಟ ಪ್ರಕರಣ ರದ್ದು ಪಡಿಸಿದ ರಾಜಸ್ಥಾನ ಹೈಕೋರ್ಟ್

0
509

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಂಘಪರಿವಾರ ಕಾರ್ಯಕರ್ತರು ಹೊಡೆದು ಸಾಯಿಸಿದ ಹಾಲುತ್ಪಾದಕ ರೈತ ಪೆಹ್ಲೂಖಾನ್ ಮತ್ತು ಪುತ್ರ ವಿರುದ್ಧ ಗೋಸಾಗಾಟ ಕೇಸನ್ನು ರಾಜಸ್ಥಾನ ಹೈಕೋರ್ಟು ರದ್ದು ಪಡಿಸಿದೆ. ದಾಳಿಗೆ ತುತ್ತಾದವರನ್ನು ಆರೋಪಿಗಳನ್ನಾಗಿ ಹೆಸರಿಸಿ ಕೇಸು ಹಾಕಿದ್ದನ್ನು ರದ್ದುಪಡಿಸಬೇಕೆಂದು ಪೆಹ್ಲೂಖಾನ್‍ರ ಪುತ್ರರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

2017 ಎಪ್ರಿಲ್ 1 ರಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆಹ್ಲೂಖಾನ್ ಮತ್ತು ಮಕ್ಕಳ ಮೇಲೆ ಗೋರಕ್ಷಕ ಗೂಂಡಾಗಳು ದಾಳೀ ಮಾಡಿದ್ದರು. ಐವತ್ತೈದು ವರ್ಷದ ಪೆಹ್ಲೂಖಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಂದಿನ ಬಿಜೆಪಿ ಸರಕಾರ ಪೆಹ್ಲೂಖಾನ್ ಮತ್ತು ಮಕ್ಕಳ ವಿರುದ್ಧ ಅಕ್ರಮ ಗೋ ಸಾಗಾಟ ಕೇಸು ಜಡಿದಿತ್ತು. ಅಂದು ರಾಜಸ್ಥಾನ ಪೊಲೀಸರು ಪೆಹ್ಲೂಖಾನ್ ಮಕ್ಕಳ ವಿರುದ್ಧ ಕೇಸನ್ನು ಹಿಂಪಡೆಯಲು ತಯಾರಾಗಿರಲಿಲ್ಲ. ಇದೀಗ ಹೈಕೋರ್ಟು ವಜಾಗೊಳಿಸಿದೆ.

ಪೆಹ್ಲೂಖಾನ್ ಹಂತಕರನ್ನು ಸಂಶಯದ ಲಾಭದಲ್ಲಿ ಕೋರ್ಟು ಖುಲಾಸೆಗೊಳಿಸಿದ ಬಳಿಕ ಪೊಲೀಸರು ಪೆಹ್ಲೂಖಾನ್ ಮಕ್ಕಳ ವಿರುದ್ಧ ಅಕ್ರಮ ಗೋ ಸಾಗಾಟ ಕೇಸು ದಾಖಲಿಸಿದ್ದರು. ರಾಜಸ್ತಾನದ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯಕ್ಕೆ ಎಲ್ಲ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ಸರಕಾರದ ಕಾಲದಲ್ಲಿ ಘಟನೆ ನಡೆದಿದ್ದರೂ ಗೋಸಾಗಾಟ ಕೇಸು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದಾಖಲಿಸಲಾತ್ತು.