ಅಯೋಧ್ಯೆ ಜಗತ್ತಿನ ಪ್ರಧಾನ ಪ್ರಕರಣಗಳಲ್ಲೊಂದು- ನಿಯುಕ್ತ ಚೀಫ್ ಜಸ್ಟಿಸ್ ಬೊಬ್ಡೆ

0
568

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.1: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣವು ಜಗತ್ತಿನ ಅತಿ ಪ್ರಧಾನ ಪ್ರಕರಣಗಳಲ್ಲಿ ಒಂದು ಎಂದು ನಿಯೋಜಿತ ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ಎಸ್‍.ಐ.ಬೊಬ್ಡೆ ಹೇಳಿದ್ದಾರೆ.

ಅಯೋಧ್ಯೆ ಪ್ರಕರಣ ವಿಚಾರಣೆ ಪೀಠದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದ್ದು ತನ್ನ ವಿಶೇಷ ಹಕ್ಕು ಎಂದು ಪರಿಗಣಿಸುವೆ. ಕಾಶ್ಮೀರ ವಿಷಯದಲ್ಲಿ ಸುಪ್ರೀಂಕೋರ್ಟು ಅಗತ್ಯವಿದ್ದುದನ್ನು ಮಾಡಿತೇ ಎಂದು ಕೇಳಿದಾಗ ಇದು ಪರಿಗಣನೆಯಲ್ಲಿರುವ ವಿಚಾರ ಈಗ ಏನೂ ಹೇಳುವಂತಿಲ್ಲ ಎಂದರು.

ಅಯೋಧ್ಯೆ ಪ್ರಕರಣ ಈ ತಿಂಗಳು ಹದಿನಾರೊಳಗೆ ತೀರ್ಪು ನೀಡುವುದಾಗಿ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಹೇಳಿದ್ದಾರೆ. ಬೊಬ್ಡೆ ಕೂಡ ಪ್ರಕರಣದ ವಿಚಾರಣಾ ಪೀಠದಲ್ಲಿದ್ದಾರೆ.

ಮುಂದಿನ ಚೀಫ್ ಜಸ್ಟಿಸ್ ಆದೇಶ ಹೊರಡಿಸಲಾದ್ದರಿಂದ ಅವರು ಬೇರೆ ಬೇರೆ ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ಈ ತಿಂಗಳು ಹದಿನೆಂಟರಂದು ಬೊಬ್ಡೆ ಚೀಫ್ ಜಸ್ಟಿಸ್ ಆಗಿ ಅಧಿಕಾರಕ್ಕೆ ಬರಲಿದ್ದಾರೆ. ಸುಪ್ರೀಂಕೋರ್ಟಿನ ಕೊಲಿಜಿಯಂ ಪ್ರಕ್ರಿಯೆಯಲ್ಲಿ ಸರಕಾರ ಹಸ್ತಕ್ಷೇಪಿಸದು ಎಂದು ಬೊಬ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.