ಮತಾಂತರಗೊಂಡ ವಕೀಲೆ ಜಡ್ಜ್ ಆಗುವುದನ್ನು ವಿರೋಧಿಸಿದ ಕೇಂದ್ರ ಸರಕಾರದ ವಾದವನ್ನು ತಿರಸ್ಕರಿಸಿದ ಕೊಲಿಜಿಯಂ

0
920

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.1: ಮತಾಂತರಗೊಂಡ ನ್ಯಾಯವಾದಿಯನ್ನು ಹೈಕೋರ್ಟು ಜಡ್ಜ್ ಮಾಡುವುದನ್ನು ತಡೆದು ಮೋದಿ ಸರಕಾರ ಎತ್ತಿದ ಅಡ್ಡಿವಾದಗಳನ್ನು ಸುಪ್ರೀಂಕೋರ್ಟಿನ ಕೊಲಿಜಿಯಂ ತಿರಸ್ಕರಿಸಿದೆ.

ಜಮ್ಮು-ಕಾಶ್ಮೀರ ಬಾರ್‌ನ ವಕೀಲೆ ಮೋಕ್ಷ ಕಾಸ್ಮಿ ಕಜೂರಿಯವರನ್ನು ಹೈಕೋರ್ಟು ಜಡ್ಜ್ ಆಗಿ ಮಾಡುವುದನ್ನು ಮೋದಿ ಸರಕಾರ ವಿರೋಧಿಸಿತ್ತು. ಜಮ್ಮುವಿನ ಹಿಂದೂ ಕುಟುಂಬದಲ್ಲಿ ಹುಟ್ಟಿದ್ದ ಮೋಕ್ಷ ಕಾಸ್ಮಿ ಕಜೂರಿ ಇಸ್ಲಾಮ್ ಸ್ವೀಕರಿಸಿ ಕಾಶ್ಮೀರಿ ಉದ್ಯಮಿ ಯಾಸಿರ್ ಸಈದ್‍ರನ್ನು ಮದುವೆಯಾಗಿದ್ದರು. ಕಜೂರಿಯವರನ್ನು ಜಡ್ಜ್ ಮಾಡುವುದನ್ನು ಓರ್ವ ವಕೀಲೆ ಎಂಬ ನೆಲೆಯಲ್ಲಿ ಅವರ ಅರ್ಹತೆಯನ್ನು ಕೇಂದ್ರ ಸರಕಾರ ಪ್ರಶ್ನಿಸಿತ್ತು.

ಆದಾಯದ ಹೆಚ್ಚಳ ಕುರಿತ ವಿವರವನ್ನು ಕೇಂದ್ರ ಸರಕಾರ ಕೊಲಿಜಿಯಂ ಮುಂದೆ ಇಟ್ಟಿತು. ಅವರ ಪತಿಗೆ ಮೆಹಬೂಬ ಮುಫ್ತಿಯ ಪಿಡಿಪಿ ಪಾರ್ಟಿಯೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿತ್ತು. ಆದರೆ, ಸರಕಾರದ ಆರೋಪಗಳನ್ನು ತಳ್ಳಿಹಾಕಿ ಕಜೂರಿಯವರನ್ನು ಜಮ್ಮು-ಕಾಶ್ಮೀರದ ಜಡ್ಜ್ ಆಗಿ ಕೊಲಿಜಿಯಂ ಶಿಫಾರಸು ಮಾಡಿದೆ.

ಜಮ್ಮು ಕಾಶ್ಮೀರ ಹೈಕೋರ್ಟು ಕೊಲಿಜಿಯಂ ಜಡ್ಜ್ ಮಾಡಲು ಶಿಫಾರಸ್ಸು ಮಾಡಿದ ಇಬ್ಬರು ವಕೀಲರ ಹೆಸರುಗಳನ್ನು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯ ಕೊಲಿಜಿಯಂ ಅಂಗೀಕರಿಸಿದೆ. ಇಬ್ಬರು ವಕೀಲರ ಹೆಸರನ್ನು ತಿರಸ್ಕರಿಸಿತ್ತು. ಅಂಗೀಕಾರಗೊಂಡವರಲ್ಲಿ ಮೋಕ್ಷಾ ಕಾಸ್ಮಿ ಕೂಡ ಇದ್ದಾರೆ. ಮೋಕ್ಷ, ಪಿಡಿಪಿ-ಬಿಜೆಪಿ ಸಖ್ಯ ಸರಕಾರದಲ್ಲಿ ಅಡಿಶನಲ್ ಅಡ್ವಕೇಟ್ ಜನರಲ್ ಆಗಿ ಕೆಲಸ ಮಾಡಿದ್ದರು.