ಸನ್ಮಾರ್ಗ ವಾರ್ತೆ
ಕೇರಳ,ನ.೪; ದಲಿತ ಸಮುದಾಯಕ್ಕೆ ಸೇರಿದ ಒಂಬತ್ತನೆ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಅಕ್ಟೋಬರ್ ೩೦ರಂದು ಬಾಲಕಿಯ ಅಪಹರಣ ನಡೆದಿತ್ತು. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಶಾಲೆಯ ಮುಖ್ಯದ್ವಾರದಿಂದ ಬಾಲಕಿ ಹೊರಬರುವುದು ಕಾಣಿಸಿತ್ತು.
ಮರುದಿವಸ ತುಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಲೆದಾಡುತ್ತಿದ್ದ ಬಾಲಕಿ ಪತ್ತೆಯಾಗಿದ್ದಳು. ನಂತರ ಬಾಲಕಿ ತನಗೆ ಲೈಂಗಿಕ ಕಿರುಕುಳ ನೀಡಿದ ವಿವರವನ್ನು ಪೊಲೀಸರಿಗೆ ತಿಳಿಸಿದ್ದಳು. ಬೈಕಿನಲ್ಲಿ ಬಂದ ಇಬ್ಬರು ಬಲವಂತದಿಂದ ತನ್ನನ್ನು ಎತ್ತಿಕೊಂಡು ಹೋಗಿದ್ದರು. ಜನರಿಲ್ಲದ ಮನೆಯಲ್ಲಿ ಅತ್ಯಾಚಾರ ವ್ಯಸಗಿದ ನಂತರ ಮರು ದಿವಸ ಬೆಳಗ್ಗೆ ಕಯಕ್ಕೂಟಂ ಎಂಬಲ್ಲಿ ಬೈಕ್ನಲ್ಲಿ ತಂದು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾಳೆ.
ಆರೋಪಿಗಳು ಉಪಯೋಗಿಸಿದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅತ್ಯಾಚಾರ ಆರೋಪಿಗಳಾದ ಮರ್ಯನಾಡ್ ಎಂಬಲ್ಲಿನ ಸೋಜನ್, ಅಭಿಲಾಶ್, ಟೋಮಿ, ನಿರಂಜನ್ ಎಂದು ಗುರುತಿಸಲಾಗಿದ್ದು, ಯುವಕರನ್ನು ಪೊಲೀಸರು ಅತ್ಯಾಚಾರ ಆರೋಪದಲ್ಲಿ ಬಂಧಿಸಿದ್ದಾರೆ.<!p>












