ಅಶ್ಲೀಲ ವೀಡಿಯೊ: ದಿಯು,ದಾಮನ್ ಬಿಜೆಪಿ ಅಧ್ಯಕ್ಷ ರಾಜೀನಾಮೆ

0
2120

ಸನ್ಮಾರ್ಗ ವಾರ್ತೆ

ದಾಮನ್,ನ.೪: ಮಾಜಿ ಸಂಸದ ದಿಯು,ದಾಮನ್ ಕೇಂದ್ರಾಡಳಿತ ಪ್ರದೇಶ ಬಿಜೆಪಿ ಅಧ್ಯಕ್ಷ ಗೋಪಾಲ್ ಟಂಡೆಲ್ ರಾಜೀನಾಮೆ ನೀಡಿದ್ದಾರೆ. ಮಹಿಳೆಯೊಂದಿಗಿರುವ ಅಶ್ಲೀಲ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ನಂತರ ಅವರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಗೆ ಗೋಪಾಲ್ ರಾಜೀನಾಮೆ ಪತ್ರ ಕಳುಹಿಸಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ವಸುಭಾಯ್ ಪಟೇಲ್ ತಿಳಿಸಿದರು.

ದಿಯು,ದಾಮನ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ವಾರ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲಿ ವೀಡಿಯೊ ಪ್ರಚಾರವಾಗುತ್ತಿದೆ. ತಾನು ಪುನಃ ಆಯ್ಕೆಯಾಗದಿರಲು ಪಾರ್ಟಿಯೊಳಗಿನವರು ತನ್ನ ಮುಖವನ್ನು ಮೋರ್ಫ್ ಮಾಡಿ ನಕಲಿ ವೀಡಿಯೊ ಪ್ರಚಾರ ಮಾಡಿದ್ದಾರೆ ಎಂದು ಗೋಪಾಲ್ ಆರೋಪಿಸಿದರು. ಈ ಹಿಂದೆ ಗೋಪಾಲ್ ಕಾಂಗ್ರೆಸ್ ಮತ್ತು ಎನ್‌ಸಿಪಿಯಲ್ಲಿದ್ದರು. ಗೋಪಾಲ್ ನಾಲ್ಕು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.