41 ಕೋಳಿ ಮೊಟ್ಟೆ ತಿಂದ ವ್ಯಕ್ತಿ ಕುಸಿದು ಬಿದ್ದು ಸಾವು

0
620

ಸನ್ಮಾರ್ಗ ವಾರ್ತೆ

ಜೋನ್‌ಪುರ(ಉತ್ತರಪ್ರದೇಶ),ನ.5: ಉತ್ತರಪ್ರದೇಶ ಜೋನ್‌ಪುರ ಜಿಲ್ಲೆಯಲ್ಲಿ ಕೋಳಿಮೊಟ್ಟೆ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ ವ್ಯಕ್ತಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಸುಭಾಶ್ ಯಾದವ್ (42) ಮೃತಪಟ್ಟ ನತದೃಷ್ಟ ವ್ಯಕ್ತಿಯಾಗಿದ್ದಾನೆ. ಈತ ಮತ್ತು ಗೆಳೆಯನ ನಡುವೆ ಐವತ್ತು ಮೊಟ್ಟೆ ತಿಂದರೆ ೨,೦೦೦ ರೂ. ಕೊಡುವ ಸ್ಪರ್ಧೆ ನಡೆದಿತ್ತು. ಸುಭಾಶ್ 41 ಮೊಟ್ಟೆ ತಿಂದಿದ್ದಾನೆ. 42ನೆ ಮೊಟ್ಟೆ ತಿನ್ನವಾಗ ಕುಸಿದು ಬಿದ್ದಿದ್ದನು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಒಂದು ಗಂಟೆಯೊಳಗೆ ಆತ ಅಸುನೀಗಿದ್ದಾನೆ. ಹೆಚ್ಚು ಆಹಾರ ಸೇವನೆ ಸಾವಿಗೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.