ಎರಡೇ ನಿಮಿಷದಲ್ಲಿ ತನ್ನ ಆಡಳಿತ ಸಾಧನೆ ಹೇಳಿ ಮುಗಿಸಿದ ನ್ಯೂಜಿಲೆಂಡ್ ಪ್ರಧಾನಿ ಜೆಸಿಂತಾ- ವೀಡಿಯೊ

0
1343

ಸನ್ಮಾರ್ಗ ವಾರ್ತೆ

ವೆಲಿಂಗ್ಟನ್,ನ.6: ನ್ಯೂಝಿಲೆಂಡಿನ ಹಣೆಬರಹ ಬದಲಾಯಿಸಿದ ಪ್ರಧಾನಿ ಜೆಸಿಂತಾ ಆರ್ಡನ್ ತನ್ನ ಸರಕಾರದ ಸಾಧನೆಯನ್ನು 2 ನಿಮಿಷ 56 ಸೆಕೆಂಡಿನಲ್ಲಿ ಹೇಳಿ ಮುಗಿಸಿದ್ದಾರೆ. ಎರಡು ವರ್ಷದ ಲೇಬರ್ ಸರಕಾರದ ಸಾಧನೆಯನ್ನು ಜಸಿಂತಾ ಎಣಿಸಿದರು.

ಈ ವೀಡಿಯೊ ಸ್ವಪಕ್ಷೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. 23 ಲಕ್ಷಕ್ಕೂ ಹೆಚ್ಚು ಮಂದಿ ವೀಡಿಯೊ ನೋಡಿದ್ದಾರೆ. 92,೦೦೦ ಹೊಸ ಉದ್ಯೋಗವಕಾಶಗಳು, 22೦೦ ಮನೆಗಳು,ಕಾರ್ಬೊನ್‌ ರಹಿತ ರಾಷ್ಟ್ರ ಗುರಿಯಿಟ್ಟು ಮಸೂದೆ ಮಂಡಿಸಿದ್ದು, ಹೆದ್ದಾರಿಗಳನ್ನು ಅಪಘಾತ ರಹಿತಗೊಳಿಸಿದ್ದು ಒಂದೇ ಉಸಿರಿನಲ್ಲಿ ತನ್ನ ಸಾಧನೆಯನ್ನು ಹೇಳಿಕೊಂಡಿದ್ದಾರೆ. ಅದನ್ನು ಆಲಿಸುವಾಗ ನಮಗೆ ಉಸಿರುಗಟ್ಟುವಂತಾಗುತ್ತದೆ.

ಎರಡು ವರ್ಷದಲ್ಲಿ ನ್ಯೂಝಿಲೆಂಡಿನ ಜೈಲುಗಳಲ್ಲಿ ಕೈದಿಗಳ ಸಂಖ್ಯೆ ಕಡಿಮೆಯಾಗಿದ್ದು, ದೇಶದಲ್ಲಿ 14 ಕೋಟಿ ಸಸಿಗಳನ್ನು ನೆಟ್ಟದ್ದು, ಕ್ಯಾನ್ಸರ್ ರೋಗಿಗಳಿಗೆ ಉನ್ನತ ಚಿಕಿತ್ಸೆ ಲಭ್ಯಗೊಳಿಸಿದ್ದು. ಒಂದೇ ಬಾರಿ ಉಪಯೋಗಿಸುವ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಿದ್ದು ಹೀಗೆ ಇವರ ಸಾಧನೆ ಮುಂದುವರಿಯುತ್ತಿದೆ.

ಲೇಬರ್ ಪಾರ್ಟಿಯ ಟಿಕೆಟಿನಲ್ಲಿ ಸ್ಪರ್ಧಿಸಿದ ಜಸಿಂತಾ 37ನೆ ವರ್ಷದಲ್ಲಿ ಪ್ರಧಾನಿಯಾದರು. ಫೇಸ್‌ಬುಕ್‌ನಲ್ಲಿ 7೦೦೦ ಕಮೆಂಟ್‌ಗಳು ಬಂದಿವೆ. ಕ್ರೈಸ್ಟ್ ಚರ್ಚ್ ಮಸೀದಿಯಲ್ಲಿ ಭಯೋತ್ಪಾದನಾ ದಾಳಿಯಾಗಿ ಹೆದರಿದ ಜನರನ್ನು ಅಪ್ಪಿಹಿಡಿದ ಜೆಸಿಂತಾ ವಿಶ್ವಕ್ಕೆ ಮಾದರಿಯಾಗಿದ್ದರು.