ನ್ಯೂಸ್ ಡೆಸ್ಕ್
ನವದೆಹಲಿ: ಕೇಂದ್ರ ರೈಲ್ವೇ ಸಚಿವ ಪೀಯೂಷ್ ಗೋಯಲ್ ಪತ್ನಿ ಸೀಮಾ ಗೋಯಲ್ ಒಡೆತನದ ಕಂಪೆನಿಯ ಆದಾಯದಲ್ಲಿ ಹತ್ತು ವರ್ಷದಲ್ಲಿ ಮೂರುಸಾವಿರ ಪಟ್ಟು ಹೆಚ್ಚಳವಾಗಿದೆ ಎಂಬ ಆರೋಪದೊಂದಿಗೆ ಕಾಂಗ್ರೆಸ್ ರಂಗಕ್ಕಿಳಿದಿದೆ. ಬಿಜೆಪಿ ಅದ್ಯಕ್ಷರಾದ ಅಮಿತ್ ಶಾ ಪುತ್ರ ಜಯ್ ಶಾ ಕಂಪೆನಿ ಬೆಳೆದ ಅದೇ ರೀತಿಯಲ್ಲಿ ಸೀಮಾ ಗೋಯಲ್ ಕಂಪೆನಿ ಬೆಳೆದಿದೆ. ಸೀಮಾ ಗೋಯೆಲ್ ಕುಟುಂಬದೊಂದಿಗೆ ಸಂಬಂಧವಿರುವ ಕಂಪೆನಿಗಳು ಬ್ಯಾಂಕುಗಳಿಂದ ಪಡೆದ ಬೃಹತ್ ಸಾಲಗಳು ಮರುಪಾವತಿಸದ ಸಾಲವಾಗಿ ದಾಖಲಾಗಿವೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಗೋಯೆಲ್ ಕುಟುಂಬದೊಂದಿಗೆ ಸಂಪರ್ಕವಿರುವ ಶಿರ್ಡಿ ಇಂಡಸ್ಟ್ರೀಸ್ ಯೂನಿಯನ್ ಬ್ಯಾಂಕ್ನಿಂದ ಪಡೆದ 651 ಕೊಟಿ ಸಾಲದಲ್ಲಿ ಶೇಕಡಾ 65ರಷ್ಟು ಪಾವತಿಸಲಾಗದೆ ಉಳಿದಿದೆ ಎಂದು ಕಾಂಗ್ರೇಸ್ ಬಹಿರಂಗಡಿಸಿದೆ.
ಪೀಯೂಶ್ ಗೋಯೆಲ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಕೇವಲ ಒಂದು ಲಕ್ಷ ರೂಪಾಯಿ ಬಂಡವಾಳ ಹಾಕಿ 2005/06 ರಲ್ಲಿ ಸೀಮಾ ಗೋಯೆಲ್ರ ಒಡೆತನದ ಕಂಪೆನಿ ಪ್ರಾರಂಭವಾಗಿತ್ತು. ಕೇಂದ್ರ ಸಚಿವನಾಗುವುದಕ್ಕಿಂತ ಸ್ವಲ್ಪ ಮುಂಚೆ 2014ರ ಮೇ 14ರಂದು ಪೀಯೂಶ್ ಗೋಯೆಲ್ ಅದರ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿ ಪತ್ನಿಗೆ ಹಸ್ತಾಂತರಿಸಿದ್ದರು. ಒಟ್ಟು ಹತ್ತು ಸಾವಿರ ಶೇರುಗಳಲ್ಲಿ 999 ಪತ್ನಿ ಸೀಮಾ ಹೆಸರಲ್ಲಿದ್ದರೆ ಉಳಿದವುಗಳು ಪುತ್ರ ಧ್ರುವ ಹೆಸರಲ್ಲಿತ್ತು. ಹತ್ತು ವರ್ಷ ವಾಗುವಷ್ಟರಲ್ಲಿ ಕಂಪೆನಿಯ ವರಮಾನ ಮೂವತ್ತು ಕೋಟಿಗೆ ತಲುಪಿದೆ. ಅಂದರೆ ಮೂಲ ಬಂಡವಾಳದ ಮೂರುಸಾವಿರ ಪಟ್ಟು ಹೆಚ್ಚು. ಪಿಯೂಶ್ ಗೋಯೆಲ್ ಮತ್ತು ಸಂಬಂಧಿಕರ ಒಡೆತನದ ಹನ್ನೊಂದು ಕಂಪೆನಿಗಳಿವೆ. ಇದರಲ್ಲಿ ಹಲವು ಕಂಪೆನಿಗಳ ಆರ್ಥಿಕ ಸ್ಥಿತಿ ಶೊಚನೀಯ. ಅದರಲ್ಲಿ ಹೆಚ್ಚಿನವುಗಳು ಪಡೆದ ಬ್ಯಾಂಕುಗಳ ಸಾಲ ಮರುಪಾವತಿಸಲಾಗದ ಸಾಲವಾಗಿದೆ.












