ಮಹಾರಾಷ್ಟ್ರದಲ್ಲಿ ಶಾಸಕರ ಪ್ರಮಾಣ ವಚನ

0
551

ಸನ್ಮಾರ್ಗ ವಾರ್ತೆ

ಮುಂಬೈ, ನ.27: ಹೊಸ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆರಂಭವಾಗಿದೆ. ಸ್ಪೀಕರ್ ಕಾಳಿದಾಸ್ ಕೊಲೊಂಬೇಕರ್‍‌ರ ಮುಂದೆ 288 ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಶಾಸಕರ ಪ್ರಮಾಣ ವಚನ ಬುಧವಾರ ಸಂಜೆ ಐದು ಗಂಟೆಯೊಳಗೆ ಪೂರ್ತಿ ಮಾಡುವಂತೆ ಸುಪ್ರೀಂಕೋರ್ಟು ಆದೇಶಿಸಿತ್ತು. ಆದ್ದರಿಂದ ಪ್ರಮಾಣ ವಚನ ಸಮಾವೇಶ ವಿಧಾನ ಸಭೆಯಲ್ಲಿ ಕರೆಯಲಾಗಿದೆ.

ಹಿರಿಯ ಶಾಸಕ ಕಾಳಿದಾಸ್ ಕೊಳಂಬೇಕರ್‍‌ರನ್ನು ಸ್ಪೀಕರ್ ಆಗಿ ಕಳೆದ ದಿವಸ ನೇಮಿಸಲಾಗಿತ್ತು. ಇಂದೇ ವಿಶ್ವಾಸ ಮತಯಾಚಿಸಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ರಿಗೆ ಸುಪ್ರೀಂಕೋರ್ಟು ಗಡು ನಿಗದಿಗೊಳಿಸಿತ್ತು. ನಂತರ ಉಪಮುಖ್ಯಮಂತ್ರಿ ಎನ್‍ಸಿಪಿ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದರು. ಅದರ ಬೆನ್ನಿಗೆ ಪತ್ರಿಕಾಗೋಷ್ಠಿ ಕರೆದು ದೇವೇಂದ್ರ ಫಡ್ನವಿಸ್ ತನಗೆ ಬಹುಮತವಿಲ್ಲ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು.

ಮಂಗಳವಾರ ಮುಂಬೈಯಲ್ಲಿ ಸಭೆ ಸೇರಿ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಸಖ್ಯ ಉದ್ಧವ್ ಠಾಕ್ರೆಯವರನ್ನು ವಿಧಾನ ಸಭಾ ನಾಯಕನಾಗಿ ಆಯ್ಕೆ ಮಾಡಿದೆ. ನಂತರ ಉದ್ಧವ್ ರಾಜ್ಯಪಾಲರನ್ನು ಭೇಟಿಯಾಗಿ ಸಚಿವ ಸಂಪುಟ ರಚಿಸುವುದಾಗಿ ಹಕ್ಕು ಮಂಡಿಸಿದರು. ರವಿವಾರ ಸಂಜೆ ಐದು ಗಂಟೆಗೆ ಶಿವಾಜಿ ಪಾರ್ಕಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.