ಯಾವಾಗಲೂ ಎನ್‌ಸಿಪಿಯಲ್ಲಿರುವೆ- ಅಜಿತ್ ಪವಾರ್

0
618

ಸನ್ಮಾರ್ಗ ವಾರ್ತೆ

ಮುಂಬೈ,ನ, 27: ಸದಾ ನಾನು ಎನ್‌ಸಿಪಿಯ ಭಾಗವಾಗಿರುವೆ ಎಂದು ಶರದ್‍ ಪವಾರ್ ಸಹೋದರ ಪುತ್ರ ಅಜಿತ್ ಪವಾರ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಶಾಸಕರ ಪ್ರಮಾಣ ವಚನಕ್ಕೆ ಬಂದ ವೇಳೆ ಅಜಿತ್ ಹೇಳಿದರು. ತನ್ನ ಭವಿಷ್ಯ ಇನ್ನು ಪಾರ್ಟಿ ತೀರ್ಮಾನಕ್ಕೆ ಬಿಟ್ಟದ್ದು ಎಂದು ಅಜಿತ್ ಹೇಳಿದರು.

ಪ್ರಮಾಣ ವಚನ ಸಮಾರಂಭಕ್ಕೆ ಬಂದ ಅಜಿತ್‍ರನ್ನು ಸುಪ್ರೀಯಾ ಸುಳೆ ಸ್ವಾಗತಿಸಿದರು. ಅಜಿತ್ ಪವಾರ್ ಮರಳಿದ್ದಕ್ಕೆ ನನಗೆ ಸಂತೋಷವಾಗಿದೆ. ಅವರ ಸ್ಥಾನವನ್ನು ಪಾರ್ಟಿ ನಿರ್ಧರಿಸುವುದು ಎಂದು ಎನ್‍ಸಿಪಿ ಸಂಸದ ಸುನೀಲ್ ತತ್‍ಕರೆ ಹೇಳಿದರು.

ಅಜಿತ್ ಪವಾರ್ ಬೆಂಬಲದಿಂದ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅಜಿತ್ ಪವಾರ್ ಜೊತೆ ಹೋದ ಶಾಶಕರನ್ನು ಶರದ್‍ಪವಾರ್ ಪುನಃ ಕರೆತಂದ ಬಳಿಕ ಫಡ್ನವಿಸ್ ರಾಜೀನಾಮೆ ನೀಡಿದ್ದರು.