ಮಹಾರಾಷ್ಟ್ರ: ಉಪಮುಖ್ಯಮಂತ್ರಿ ತೀರ್ಮಾನವಾಗಿಲ್ಲ -ಕಾಂಗ್ರೆಸ್

0
573

ಸನ್ಮಾರ್ಗ ವಾರ್ತೆ

ಮುಂಬೈ,ನ.27: ಮಹಾರಾಷ್ಟ್ರ ಸರಕಾರದ ಉಪಮುಖ್ಯಮಂತ್ರಿ ಕುರಿತು ತೀರ್ಮಾನವಾಗಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಅಧ್ಯಕ್ಷ ಬಾಲಸಾಹೇಬ್ ಥೋರಾಟ್ಟ ಈ ವಿಷಯ ಹೇಳಿದ್ದು ಕಳೆದ ದಿವಸ ಥೊರಾಟ್ ಎನ್‍ಸಿಪಿಯ ಜಯಂತ್ ಪಟೇಲ್ ಉಪ ಮುಖ್ಯಮಂತ್ರಿಯಾಗುವರೆಂದು ಎನ್‍ಸಿಪಿ ನಾಯಕ ಮಾಜಿದ್ ಮೆಮನ್ ಘೋಷಿಸಿದ್ದರು. ಗುರುವಾರ ಫಡ್ನವಿಸ್ ರಾಜೀನಾಮೆ ನೀಡಿದ ಬಳಿಕ ಘೋಷಣೆ ಮಾಡಲಾಗಿತ್ತು.

ಸಖ್ಯಕ್ಕೆ ಒಂದೇ ಉಪಮುಖ್ಯಮಂತ್ರಿ ಸಾಕೆಂಬ ಚರ್ಚೆಗಳು ಈಗ ನಡೆಯುತ್ತಿದೆ. ಕಾಂಗ್ರೆಸ್, ಎನ್‍ಸಿಪಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಯಾರಿಗೆ, ಸ್ಪೀಕರ್ ಸ್ಥಾನ ಯಾರಿಗೆ ಎಂಬ ಚರ್ಚೆ ಪ್ರಗತಿಯಲ್ಲಿದೆ. ಇದಕ್ಕಾಗಿ ಸಖ್ಯ ಪಾರ್ಟಿಯ ಸಭೆ ನಡೆಯಲಿದೆ.

ಮಹಾರಾಷ್ಟ್ರ ವಿಧಾನಸಭೆಯ ಸಂಸದರ ಪ್ರಮಾಣ ವಚನ ಪ್ರಗತಿಯಲ್ಲಿದೆ. ಸುಪ್ರೀಂ ಕೋರ್ಟು ಆದೇಶದ ಪ್ರಕಾರ ಇಂದು ಸಂಜೆ ಐದು ಗಂಟೆಯೊಳಗೆ ಶಾಸಕರ ಪ್ರಮಾಣವಚನ ಕಾರ್ಯ ಮುಗಿಯಬೇಕಿದೆ. ನಾಳೆ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.