ಉದ್ಧವ್ ಅಧಿಕಾರಕ್ಕೆ ಬಂದ ಕೂಡಲೇ ಫಡ್ನವಿಸ್‍ಗೆ ಸಮನ್ಸ್!

0
1166

ಸನ್ಮಾರ್ಗ ವಾರ್ತೆ

ನಾಗಪುರ,ನ.29: ಚುನಾವಣಾ ಪ್ರಣಾಳಿಕೆಯಲ್ಲಿ ಕ್ರಿಮಿನಲ್ ಕೇಸಿನ ವಿವರ ಅಡಗಿಸಿದ ದೂರಿನಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ಗೆ ಮ್ಯಾಜಿಸ್ಟ್ರೇಟ್ ಕೋರ್ಟು ಸಮನ್ಸ್ ನೀಡಿದೆ. ಸದರ್ ಪೊಲೀಸ್ ಠಾಣೆಯ ಅಧಿಕಾರಿ ಫಡ್ನವಿಸ್ ಮನೆಗೆ ಹೋಗಿ ಸಮನ್ಸ್ ಕೊಟ್ಟು ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಿದ ದಿನವೇ ಫಡ್ನವಿಸ್‌ಗೆ ಸಮನ್ಸ್ ಬಂದು ತಲುಪಿದೆ. ನಾಗಪುರದ ವಕೀಲ ಸತೀಶ್ ಉಗೆ ದೂರಿನಲ್ಲಿ ಕೋರ್ಟು ಕ್ರಮ ಜರಗಿಸಿದೆ.

ಫಡ್ನವಿಸ್ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಅನುಮತಿ ಕೋರಿ ಉಗೆ ಮ್ಯಾಜಿಸ್ಟ್ರೇಟ್ ಕೋರ್ಟು ಮತ್ತು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿ ತಿರಸ್ಕರಿಸಲ್ಪಟ್ಟಿತ್ತು.
ನಂತರ ಉಗೆಯ ದೂರನ್ನು ಪರಿಗಣಿಸುವಂತೆ ಸುಪ್ರೀಂಕೋರ್ಟು ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಸೂಚಿಸಿತ್ತು. ಸುಪ್ರೀಂಕೋರ್ಟಿನ ನಿರ್ದೇಶದಂತೆ ನವೆಂಬರ್ ನಾಲ್ಕರಂದು ಕೋರ್ಟು ಫಡ್ನವಿಸ್‍ಗೆ ಸಮನ್ಸ್ ಕಳುಹಿಸಿದೆ. ಅವರು ಕೋರ್ಟಿಗೆ ಹಾಜರಾಗಬೇಕಾಗಿದೆ. 1996 ಮತ್ತು 98ರಲ್ಲಿ ಫಡ್ನವಿಸ್ ವಿರುದ್ಧ ಕೇಸು ದಾಖಲಾಗಿತ್ತು. ಈ ಕೇಸಿನ ವಿವರ ಚುನಾವಣಾ ಅಫಿದಾವಿತ್‍ನಲ್ಲಿ ಫಡ್ನವಿಸ್ ತಿಳಿಸಿರಲಿಲ್ಲ.