22 ಲಕ್ಷ ರೂ. ಮೌಲ್ಯದ ಈರುಳ್ಳಿ ಕೊಳ್ಳೆ

0
630

ಸನ್ಮಾರ್ಗ ವಾರ್ತೆ

ಶಿವಪುರಿ,ನ.29: ಈರುಳ್ಳಿ ಬೆಲೆಗಗನಕ್ಕೇರಿದ್ದು ಇದೇ ವೇಳೆ 22 ಲಕ್ಷ ರೂಪಾಯಿಯ ಈರುಳ್ಳಿ ಲಾರಿಯನ್ನು ದರೋಡೆ ಮಾಡಿದ ಘಟನೆ ನಡೆದಿದ್ದು ಮಹಾರಾಷ್ಟ್ರದ ನಾಸಿಕ್‍ನಿಂದ ನವೆಂಬರ್ ಹನ್ನೊಂದರಂದು ಈರುಳ್ಳಿ ಲಾರಿ ಉತ್ತರಪ್ರದೇಶದ ಗೊರಕ್‍ಪುರಕ್ಕೆ ಹೊರಟಿತ್ತು. ಅದರಲ್ಲಿ 40 ಟನ್ ಈರುಳ್ಳಿ ಇತ್ತು.

ಈರುಳ್ಳಿಯನ್ನು ದರೋಡೆ ಮಾಡಿ, ಲಾರಿಯನ್ನು ದರೋಡೆಕೋರರು ಬಿಟ್ಟು ಹೋಗಿದ್ದಾರೆ. ನಾಸಿಕ್‍ನ ಈರುಳ್ಳಿ ಹೋಲ್‍ಸೇಲ್ ವ್ಯಾಪಾರಿ ಪ್ರೇಮ್ ಚಂದ್ ಶುಕ್ಲ ಉತ್ತರ ಪ್ರದೇಶ ಪೊಲೀಸರಿಗೆ ಈರುಳ್ಳಿ ದರೋಡೆಯಾಗಿರುವುದರ ಕುರಿತು ದೂರು ನೀಡಿದ್ದಾರೆ. ಉತ್ತರಪ್ರದೇಶ್ ತೆಂಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಲಾರಿ ಕಂಡು ಬಂದಿದೆ. ಅದರಲ್ಲಿ ಈರುಳ್ಳಿ ಇರಲಿಲ್ಲ ಎಂದು ಪೊಲೀಸ್ ಸೂಪರಿಡೆಂಟ್ ರಾಜೇಶ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.