ಸನ್ಮಾರ್ಗ ವಾರ್ತೆ
ರಿಯಾದ್,ಡಿ.5:ಮುಂದಿನ ವಾರ ಸೌದಿ ಅರೇಬಿಯಾ ರಾಜಧಾನಿ ರಿಯಾದ್‍ನಲ್ಲಿ ನಡೆಯುವ ಗಲ್ಫ್ ದೇಶಗಳ ಶೃಂಗಕ್ಕೆ ಕತಾರ್ ಅಮೀರ್‌ರಿಗೆ ಸೌದಿ ದೊರೆ ಸಲ್ಮಾನ್ ಆಮಂತ್ರಣ ನೀಡಿದರು. ಕತಾರ್ ವಿರುದ್ಧ ಸೌದಿಯ ಸಹಿತ ನೆರೆ ರಾಜ್ಯಗಳ ಸಂಪೂರ್ಣ ದಿಗ್ಬಂಧನ ಎರಡೂವರೆ ವರ್ಷಗಳಿಂದ ಮುಂದುವರಿದಿದೆ. ಇದೇ ವೇಳೆ ಸೌದಿ ದೊರೆ ನೀಡಿದ ಆಮಂತ್ರಣ ಕುತೂಹಲ ಸೃಷ್ಟಿಸಿದೆ. ಮಂಗಳವಾರ ಕತಾರ್ ರಾಷ್ಟ್ರೀಯ ಮಾಧ್ಯಮಗಳಲ್ಲಿ ಇದು ವರದಿಯಾಗಿದ್ದು ಕತಾರ್ ಭಾಗವಹಿಸುವ ವಿಷಯವನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ.
ಡಿಸೆಂಬರ್ ಹತ್ತಕ್ಕೆ ಆರು ಸದಸ್ಯ ದೇಶಗಳ ಗಲ್ಫ್ ಕೊಆಪರೇಷನ್ ಕೌನ್ಸಿಲ್ ಜಿಸಿಸಿ ಶೃಂಗ ರಿಯಾದಿನಲ್ಲಿ ನಡೆಯಲಿದ್ದು ಕತಾರ್ ಅಮೀರ್ ಭಾಗವಹಿಸುವ ಸೂಚನೆ ಲಭ್ಯವಾಗಿದೆ.
2017ರ ಜೂನ್‍ನಲ್ಲಿ ಕತಾರ್ ವಿರುದ್ಧ ಸೌದಿ, ಬಹ್ರೈನ್, ಯುಎಇ, ಈಜಿಪ್ಟ್ ತೀವ್ರವಾದ ಆರೋಪ ಹೊರಿಸಿ ಭೂ, ಆಕಾಶ, ನೌಕಾ ಕ್ಷೇತ್ರದಲ್ಲಿ ದಿಗ್ಬಂಧನ ಹೇರಿತ್ತು. ಕಳೆದ ವಾರ ಕತಾರ್ ಆರಂಭಿಸಿದ ಅರೇಬಿಯನ್ ಗಲ್ಫ್ ಕಪ್‍ನಲ್ಲಿ ಸೌದಿ, ಯುಎಇ, ಬಹ್ರೈನ್ ದೇಶದ ಫುಟ್‍ಬಾಲ್ ಟೀಮ್‌ಗಳು ಭಾಗವಹಿಸಿವೆ. ಗುರುವಾರ ಸೆಮಿಫೈನಲ್ ನಡೆಯಲಿದ್ದು ಕತಾರ್ ಮತ್ತು ಸೌದಿ ನಡುವೆ ನಡೆಯಲಿದೆ. ದಿಗ್ಬಂಧಿತ ದೇಶಗಳು ಕತರ್‍ನೊಡನೆ ಮುನಿಸಿಕೊಂಡಿದ್ದರೂ ಈ ಎಲ್ಲ ಘಟನೆಗಳು ರಾಜಕೀಯ ವಲಯದಲ್ಲಿ ತೀವ್ರ ನಿರೀಕ್ಷೆ ಸೃಷ್ಟಿಸಿದೆ. ಇವೆಲ್ಲ ವೈರತ್ವ ಕಡಿಮೆಯಾಗುವ ಸೂಚನೆಗಳು.












