ಕೋಝಿಕ್ಕೋಡ್, ಡಿ. 9: ಭಾರತದಲ್ಲಿ ಮುಸ್ಲಿಮರ ಶೈಕ್ಷಣಿಕ ಹಿಂದುಳಿಕೆಗೆ ವಿವಿಧ ಸರಕಾರಗಳು ಮತ್ತು ರಾಜಕೀಯ ಆಂದೋಲನಗಳ ನಿರ್ಲಕ್ಷ್ಯ ಕಾರಣವೆಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಅವರು ಮರ್ಕಝ್ 43ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಮರ್ಕಝ್ ನಾಲೇಜ್ ಸಿಟಿಯ ಕಲ್ಚರಲ್ ಸೆಂಟರಿನಲ್ಲಿ ರಾಜ್ಯಮಟ್ಟದ ನಾಯಕರ ಸಂಗಮವನ್ನು ಉದ್ಘಾಟಿಸುತ್ತಾ ಹೇಳಿದರು.
ದಿನದಿಂದನಕ್ಕೆ ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಗಳು ಆಗುತ್ತಿರುವ ಕಾಲವಿದು. ಅಂತಹ ಬದಲಾವಣೆಗಳನ್ನು ಎದುರಿಸಲು, ಪ್ರಯೋಜನಕ್ಕೆ ಬಳಸಲು ಸಾಧ್ಯವಾಗುವ ಮಾನವ ಸಂಪನ್ಮೂಲಗಳನ್ನು ಬೆಳೆಸಬೇಕಾಗಿದೆ ಎಂದು ಅವರು ಹೇಳಿದರು.












