ಮುಸ್ಲಿಮರಿಗೆ ಐದು ಎಕರೆ ಕೊಡಬೇಕಾಗಿಲ್ಲ- ಹಿಂದೂ ಮಹಾಸಭಾ

0
918

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 9: ಬಾಬರಿಮಸೀದಿ ವಿವಾದ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ಹಿಂದೂ ಮಹಾಸಭಾ ಮರುಪರಿಶೀಲನಾ ಅರ್ಜಿಸಲ್ಲಿಸಲಿದೆ. ಮಸೀದಿ ಕಟ್ಟಲು ಮುಸ್ಲಿಮರಿಗೆ ಐದು ಎಕರೆ ಜಮೀನು ನೀಡಬೇಕಾಗಿಲ್ಲ ಎಂದು ಹಿಂದೂ ಮಹಾಸಭಾ ಅರ್ಜಿಯಲ್ಲಿ ವಾದಿಸಿದೆ. ಅಯೋಧ್ಯೆ ಪ್ರಕರಣದಲ್ಲಿ ಇದೇ ಮೊದಲ ಸಲ ಹಿಂದೂ ಸಂಘಟನೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.

ಅಯೋಧ್ಯೆಯ ವಿವಾದ ಭೂಮಿಯಲ್ಲಿ ಮುಸ್ಲಿಮರಿಗೆ ಹಕ್ಕಿಲ್ಲ ಎಂದು ಸಾಬೀತಾದ್ದರಿಂದ ಮಸೀದಿ ನಿರ್ಮಿಸಲು ಐದು ಎಕರೆ ಜಮೀನು ಕೊಡಬೇಕಾಗಿಲ್ಲ ಎಂದು ಮಹಾಸಭಾ ಹೇಳುತ್ತಿದೆ. ಸುಪ್ರೀಂಕೋರ್ಟಿನ ಐವರು ಸದಸ್ಯರ ಪೀಠದ ತೀರ್ಪಿನ ವಿರುದ್ಧ ಆರು ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಐದನ್ನು ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡಿಗಾಗಿ ವಿವಿದ ವ್ಯಕ್ತಿಗಳು ಸಲ್ಲಿಸಿದ್ದಾರೆ. ಮೌಲಾನ ಮುಫ್ತಿ ಹಸ್ಬುಲ್ಲ, ಮಾಲಾನಾ ಮಹ್‍ಫುಝುರ್ರಹ್ಮಾನ್, ಮಿಶ್‍ಬಹುದ್ದೀನ್, ಮುಹಮ್ಮದ್ ಉಮರ್, ಹಾಜಿ ನಹ್‍ಬೂಬ್ ಅರ್ಜಿ ಸಲ್ಲಿಸಿದ್ದು ಆರನೆ ಅರ್ಜಿಯನ್ನು ಮುಹಮ್ಮದ್ ಅಯ್ಯೂಬ್ ಎಂಬ ವ್ಯಕ್ತಿ ಸಲ್ಲಿಸಿದ್ದಾರೆ.