ಸನ್ಮಾರ್ಗ ವಾರ್ತೆ-
ಮುಂಬೈ, ಡಿ. 11: ಪ್ರಧಾನಿಯ ಸುತ್ತ ಅಧಿಕಾರವನ್ನು ಕೇಂದ್ರೀಕರಿಸುತ್ತಿರುವುದು ದೇಶದ ಆರ್ಥಿಕ ಮಾಂದ್ಯಕ್ಕೆ ಮುಖ್ಯ ಕಾರಣವೆಂದು ಶಿವಸೇನೆ ಮುಖವಾಣಿ ಸಾಮ್ನಾ ಆರೋಪಿಸಿದೆ. ಶೇರು ಮಾರುಕಟ್ಟೆಯ ಊಹಾ ವ್ಯಾಪಾರವಾಗಿ ಬಿಜೆಪಿ ಸರಕಾರ ಆರ್ಥೀಕ ಕ್ಷೇತ್ರವನ್ನು ಪರಿಗಣಿಸಿದೆ. ವಿತ್ತ ಸಚಿವರು, ವಿತ್ತ ಕರ್ಯದರ್ಶಿ, ರಿಸರ್ವ ಬ್ಯಾಂಕ್ ಗವರ್ನರ್, ನೀತಿ ಆಯೋಗ್ ಎಲ್ಲವನ್ನೂ ಪ್ರಧಾನಿ ತನ್ನ ನಿಯಂತ್ರಣದಲ್ಲಿರಿಸಿಕೊಂಡಿದ್ದಾರೆ. ಆರ್ಥಿಕ ತಜ್ಞರ ಅಭಿಪ್ರಾಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಶಿವಸೇನೆ ಹೇಳಿದೆ.
ಈಗಿ ಆರ್ಥಿಕ ಬಿಕ್ಕಟ್ಟಿನಲ್ಲಿ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾಗಾಂಧಿಯನ್ನು ಟೀಕಿಸಿ ಬಿಜೆಪಿಗೆ ಪಾರಾಗಲು ಸಾಧ್ಯವಿಲ್ಲ. ವಿತ್ತಖಾತೆಯ ಸಚಿವರನ್ನು ರಬ್ಬರ್ ಸ್ಟಾಂಪ್ ಮಾಡಿ ಎಲ್ಲ ಅಧಿಕಾರವನ್ನೂ ಪ್ರಧಾನಿ ಕೇಂದ್ರೀಕರಿಸಿದ್ದಾರೆ. ಇದು ಆರ್ಥಿಕ ಕ್ಷೇತ್ರಕ್ಕೆ ಉತ್ತಮವಲ್ಲ. ದೇಶದ ಆರ್ಥಿಕ ಮಾಂದ್ಯವನ್ನು ಒಪ್ಪಲು ಕೂಡ ಪ್ರಧಾನಿ ತಯಾರಾಗಿಲ್ಲ. ಪರಿಸ್ಥಿತಿ ಸುಧಾರಿಸಲು ಕ್ರಮವನ್ನೂ ಜರಗಿಸುತ್ತಿಲ್ಲ.
ಈರುಳ್ಳಿ ಬೆಲೆ 200 ರೂಪಾಯಿ ದಾಟಿದಾಗ ಅದನ್ನು ತನ್ನೊಡನೆ ಕೇಳಬೇಡಿ ಎಂದು ವಿತ್ತ ಸಚಿವೆ ಹೇಳುತ್ತಿದ್ದಾರೆ. ನೆಹರೂ ಮತ್ತು ಅವರ ನಂತರದ ತಲೆಮಾರು ನಾಡಿಗೆ ಮಾಡಿಕೊಟ್ಟಿರುವುದನ್ನೆಲ್ಲ ಬಿಜೆಪಿ ಸರಕಾರ ಮಾರಾಟ ಮಾಡುತ್ತಿದೆ ಎಂದು ಸಾಮ್ನಾ ಹೇಳಿಕೊಂಡಿದೆ. ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಇಂಡಿಯ ಟುಡೆಯಲ್ಲಿ ಬರೆದ ಲೇಖನವನ್ನು ಸಾಮ್ನಾ ಉದ್ಧರಿಸಿ ಸಂಪಾದಕೀಯ ಬರೆದಿದೆ.












