ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ.11: ಲೋಕಸಭೆ ಪಾಸು ಮಾಡಿದ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ. ಪಾಕಿಸ್ತಾನದ ಭಾಷೆಯಲ್ಲಿ ಕೆಲವು ಪಕ್ಷಗಳು ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಮಾತಾಡುತ್ತಿವೆ ಎಂದವರು ರಾಜ್ಯಸಭೆಯಲ್ಲಿ ಮಸೂದೆ ಮಂಡಿಸುವ ಮೊದಲು ನಡೆದ ಬಿಜೆಪಿ ಪಾರ್ಲಿಮೆಂಟರಿ ಸಭೆಯಲ್ಲಿ ಮಾತಾಡುತ್ತಾ ಅವರು ಹೇಳಿದ್ದಾರೆ.
ಭಾರತದ ನೆರೆಯ ದೇಶಗಳಿಂದ ಧಾರ್ಮಿಕ ಅನ್ಯಾಯಕ್ಕೊಳಗಾಗಿ ಬಂದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಪೌರತ್ವ ತಿದ್ದುಪಡಿ ಮಸೂದೆ ಉದ್ದೇಶವಾಗಿದೆ. ಇವು ಸುವರ್ಣ ಲಿಪಿಯಲ್ಲಿ ಬರೆದಿಡಬೇಕಾದದ್ದೆಂದು ಮೋದಿ ಹೇಳಿದರು. ಲೋಕಸಭೆಯಲ್ಲಿ ಪೌರತ್ವ ಮಸೂದೆ ಪಾಸಾಗಿದ್ದು ರಾಜ್ಯಸಭೆಯಲ್ಲಿ ಚರ್ಚೆಗೆ ಇಡಲಾಗುವುದು. ರಾಜ್ಯಸಭೆಯಲ್ಲಿಯೂ ಸ್ಪಷ್ಟಬಹುಮತದಿಂದ ಮಸೂದೆ ಪಾಸು ಮಾಡಲಾಗವುದು ಎಂದು ಪಾರ್ಲಿಮೆಂಟರಿ ವಿಷಯಗಳ ಸಚಿವ ಪ್ರಹ್ಲಾದ ಜೋಷಿ ಸಭೆಯಲ್ಲಿ ಹೇಳಿದರು.












