ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 16: ಜಾಮಿಅ ಇಸ್ಲಾಮಿಯ, ಅಲಿಗಡ ಯುನಿವರ್ಸಿಟಿಗಳ ಘರ್ಷಣೆ ಕುರಿತು ಕೇಂದ್ರ-ರಾಜ್ಯ ಸರಕಾರಗಳು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಅವರು ಆಗ್ರಹಿಸಿದರು.
ಜಾಮಿಅ ಮಿಲ್ಲಿಯ, ಅಲಿಗಡ ವಿಶ್ವವಿದ್ಯಾನಿಲಯದಲ್ಲಿ ಅಹಿತಕರ ಘಟನೆಗಳು ನಡೆದಿರುವುದು ದೌರ್ಭಾಗ್ಯಕರವಾದುದು. ನಿರಪರಾಧಿಗಳಾದ ವಿದ್ಯಾರ್ಥಿಗಳನ್ನು ಮತ್ತು ಪ್ರಜೆಗಳನ್ನು ಇದು ಬಾಧಿಸಿದೆ. ಅವರಿಗೆ ಬಿಎಸ್ಪಿ ಬೆಂಬಲ ತಿಳಿಸುತ್ತಿದೆ ಎಂದು ಮಾಯಾವತಿ ಟ್ವೀಟ್ ಮಾಡಿದರು. ಅಪರಾಧಿಗಳು ಪತ್ತೆಹಚ್ಚಿ ಶಿಕ್ಷಿಸಬೇಕು. ಈ ಬೆಂಕಿ ದೇಶವಿಡಿ ಹರಡುವುದು. ವಿಶೇಷವಾಗಿ ಶಿಕ್ಷಣ ಸಂಸ್ಥೆಗಳಲ್ಲಿ. ಸಮಸ್ಯೆ ಇರುವ ಸ್ಥಳಗಳಲ್ಲಿ ಶಾ೦ತಿ ಕಾಪಾಡಲು ಎಲ್ಲ ಧರ್ಮದವರು ಸಿದ್ಧರಾಗಬೇಕೆಂದು ಮಾಯಾವತಿ ಆಗ್ರಹಿಸಿದರು.












