ಅಕ್ರಮಗಳು ದುರದೃಷ್ಟಕರ -ಮೋದಿ

0
523

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 16: ಪೌರತ್ವ ತಿದ್ದುಪಡಿಯ ವಿರುದ್ಧ ಅಕ್ರಮ ಹೋರಾಟಗಳು ದುರದೃಷ್ಟಕರವಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಚರ್ಚೆ, ಸಂವಾದ, ಭಿನ್ನಾಭಿಪ್ರಯಗಳು ಎದ್ದು ಬರಬೇಕು. ಆದರೆ ಸಾರ್ವಜನಿಕಾಸ್ತಿ ನಾಶ, ಸಾಮಾನ್ಯರ ಜನಜೀವನ ಅಡ್ಡಿಯಾಗುವಂತೆ ಪ್ರತಿಭಟನೆ ನಡೆಸುವುದು ನಮ್ಮ ಪರಂಪರೆಯಲ್ಲ ಎಂದು ಮೋದಿ ಟ್ವೀಟ್ ಮಾಡಿದರು.

ಪಾರ್ಲಿಮೆಂಟಿನಲ್ಲಿ ಬೃಹತ್ ಬೆಂಬಲದಿಂದ ಪೌರತ್ವ ತಿದ್ದುಪಡಿ ಪಾಸಾಗಿದೆ. ರಾಜಕೀಯ ಪಾರ್ಟಿಗಳು ಮತ್ತು ಹೆಚ್ಚಿನ ಸಂಸದರು ಮಸೂದೆ ಬೆಂಬಲಿಸಿದರು. ಒಮ್ಮತ, ಅನುಕಂಪ, ಸಹೋದರತ್ವ ಸ್ವೀಕರಿಸುವ ಶತಮಾನಗಳ ಪರಂಪರೆಯು ಭಾರತದ ಸಂಸ್ಕøತಿಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪೌರತ್ವ ತಿದ್ದುಪಡಿ ಭಾರತದ ಪ್ರಜೆಗಳನ್ನೋ, ಧರ್ಮ ವಿಭಾಗದವರಿಗೋ ತೊಂದರೆಯನ್ನು ಮಾಡುವುದಿಲ್ಲ. ಈ ಕಾನೂನಿನಲ್ಲಿ ಹೆದರಬೇಕಾಗಿದ್ದಿಲ್ಲ. ಭಾರತದಲ್ಲಲ್ಲದೆ ಬೇರೆ ಜಾಗ ಇಲ್ಲದ ಅವಸ್ಥೆಯಲ್ಲಿರುವವರಿಗೆ ಇದು ಅನ್ವಯವಾಗುವುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ದೇಶದ ಅಭಿವೃದ್ಧಿ ಬಡವರ, ದುರ್ಬಲ ವಿಭಾಗದ ಹಸಿತ ಪ್ರತಿಯೊಬ್ಬ ಪ್ರಜೆಗಳ ಪ್ರಗತಿಗೆ ಒಟ್ಟಿಗೆ ದುಡಿಯಬೇಕಾದ ಸಮಯ ಇದು. ಭಾರತವನ್ನು ಭಿನ್ನ ಛಿನ್ನಗೊಳಿಸಲು, ಅಡ್ಡಿ ಆತಂಕ ಸೃಷ್ಟಿಸಲೋ ಸ್ಥಾಪಿತ ಹಿತಾಸಕ್ತಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ನರೇಂದ್ರ ಮೋದಿ ಹೇಳಿದರು.