ಜೆಎನ್ ಯು ದಾಂಧಲೆ: ಕ್ಯಾಂಡಲ್ ಹಿಡಿದು ಪ್ರತಿಭಟಿಸಿದ ಎಸ್ ಐ ಓ

0
537

ಸನ್ಮಾರ್ಗ ವಾರ್ತೆ-

ಉಡುಪಿ : ಜ. 7-  ಜೆಎನ್ ಯು ವಿದ್ಯಾರ್ಥಿ ಮತ್ತು ಉಪನ್ಯಾಸಕರ ಮೇಲೆ ಮುಸುಕುಧಾರಿಗಳು ಬಂದು ಏಕಾಏಕಿ ಹಾಸ್ಟೆಲ್ ಒಳಗೆ ನುಗ್ಗಿ ಹಲ್ಲೆ ನಡೆಸಿದ್ದನ್ನು ಎಸ್ ಐ ಓ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸಿದೆ.

ಉಡುಪಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಕ್ಯಾಂಡಲ್ ಹಿಡಿದು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಹಲ್ಲೆಯನ್ನು ಖಂಡಿಸಿ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಖ್ಯಾತ ಚಿಂತಕ ಪ್ರಗತಿಪರ ಹೋರಟಗಾರ ಪ್ರೊ. ಪಣಿರಾಜ್, ಯುವ ಹೋರಾಟಗಾರ ಸಮ್ವರ್ತ ಸಾಯಿಲ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಎಸ್ ಐ ಓ ಉಡುಪಿ ಜಿಲ್ಲಾದ್ಯಕ್ಷ ಅಫ್ವಾನ್ ಹೂಡೆ, ಸದಸ್ಯರಾದ ನಾಸೀರ್, ಶಾರೂಕ್, ವಸೀಮ್, ಫಾಝೀಲ್, ಅಯಾನ್ ಮುಂತಾದವರು ಉಪಸ್ಥಿತರಿದ್ದರು, ಮಣಿಪಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಆಝಾಧಿ ಘೋಷಣೆಗಳನ್ನು ಕೂಗಿದರು. ಫೈಸಲ್ ಮಲ್ಪೆ ಪ್ರತಿಭಟನೆಯನ್ನು ನಿರೂಪಿಸಿ ಧನ್ಯವಾದ ವಿತ್ತರು.