ಜೆಎನ್‍ಯು ದಾಳಿ: ಕೇಂದ್ರ ಸಮಿತಿಗೆ ಪ್ರೊ.ಸಿ.ಪಿ. ಚಂದ್ರಶೇಖರ್ ರಾಜೀನಾಮೆ

0
938

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ. 7: ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ಆರ್ಥಿಕ ವಿವರಗಳ ಅವಲೋಕನ ನಡೆಸುವ ಕೇಂದ್ರ ಸರಕಾರದ ಸಮಿತಿಗೆ ಜೆಎನ್‍ಯು ಪ್ರೊಫೆಸರ್ ಸಿ ಪಿ ಚಂದ್ರಶೇಖರ್ ರಾಜೀನಾಮೆ ನೀಡಿದರು. ಆರ್ಥಿಕ ವಿವರಗಳ ಅವಲೋಕನ ಮಾಡುತ್ತಿದ್ದ ಸಮಿತಿಯ ಮೊದಲ ಸಭೆ ಬುಧವಾರ ಸೇರಲಿದ್ದು ಇದಕ್ಕಿಂತ ಮುಂಚೆ ತನ್ನ ರಾಜೀನಾಮೆಯನ್ನು ಚಂದ್ರಶೇಖರ್ ನೀಡಿದರು. ಜೆಎನ್‍ಯುವಿನಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ನಾಳೆ ನಡೆಯುವ ಸಭೆಯಲ್ಲಿ ಭಾಗವಹಿಸಲು ಕೂಡ ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಸಮಿತಿಗೆ ದುರ್ಬಲಗೊಂಡ ಒಂದು ಸ್ಟಾಟಿಕಲ್ ಸಿಸ್ಟಂನ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಅವರು ತನ್ನರಾಜೀನಾಮೆಯ ಪತ್ರದಲ್ಲಿ ಬರೆದಿದ್ದಾರೆ.

ಜೆಎನ್‍ಯುವಿನಲ್ಲಿ ನಡೆದ ಅಕ್ರಮವು ಸಿಸ್ಟಂನ ವಿಶ್ವಾಸಾರ್ಹತೆಯನ್ನು ನಷ್ಟಗೊಳಿಸಿತು. ನಾವು ಇನ್ನೊಂದು ಲೋಕದಲ್ಲಿ ಜೀವಿಸುತ್ತಿದ್ದೇವೆಂದು ಇದರ ಮೂಲಕ ಅನಿಸುತ್ತಿದೆ. ವಿಶ್ವಾಸ ಕಳಕೊಂಡ ಒಂದು ಸರಕಾರದೊಂದಿಗೆ ಕೆಲಸ ಮಾಡುವುದು ಕಷ್ಟ ಎಂದು ಸಿ ಪಿ ಚಂದ್ರಶೇಖರ್ ರಾಜೀನಾಮೆಯ ಬಳಿಕ ಹೇಳಿದರು.

ದೃಢ ಮತ್ತು ವಿಶ್ವಾಸಾರ್ಹ ಸ್ಥಿತಿಯ ಲೆಕ್ಕಗಳಿಗಾಗಿ ಹಿಂದಿನ ಕಾಲದಲ್ಲಿ ಕೆಲಸ ಮಾಡಲು ಹಲವರು ಯತ್ನಿಸಿದ್ದಾರೆ. ರಾಜಕೀಯ ಒತ್ತಡವು ಈಗಿನ ಸಮಿತಿಯ ಸ್ವಮಯಾಧಿಕಾರ ಕಡಿಮೆ ಮಾಡಿರುವುದು ನತದೃಷ್ಟಕರವಾಗಿದೆ. ಉತ್ತಮವಾಗಿ ಮುಂದೆ ಸಾಗುತ್ತಿದ್ದ ವ್ಯವಸ್ಥೆಯೊಂದನ್ನು ದೃಢಪಡಿಸುವ ಯತ್ನಗಳನ್ನು ಬುಡಮೇಲುಗೊಳಿಸಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ನನಗೆ ಈ ಸಮಿತಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.