ಸನ್ಮಾರ್ಗ ವಾರ್ತೆ-
ಪಟ್ನಾ, ಜ. 8: ಕನ್ಹಯ್ಯ ಕುಮಾರ್ ಮತ್ತು ಪ್ರಶಾಂತ್ ಕಿಶೋರ್ ಅವರನ್ನು ಫೋರ್ಬ್ಸ್ ಮ್ಯಾಗಝಿನ್ ವಿಶ್ವದ ಉನ್ನತ 20 ಮಂದಿಯ ಪಟ್ಟಿಯಲ್ಲಿ ಸೇರಿಸಿದೆ. ಕನ್ಹಯ್ಯಾರಿಗೆ ಹನ್ನೆರಡನೆ ಸ್ಥಾನ, ಪ್ರಶಾಂತ್ ಕಿಶೋರ್ ಗೆ 16ನೆ ಸ್ಥಾನ ನೀಡಲಾಗಿದೆ. ಮ್ಯಾಗಝಿನ್ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಮತ್ತು ಎಡಿಯು ರಣತಂತ್ರಜ್ಞ ಪ್ರಶಾ೦ತ್ ಕಿಶೋರ್ ಮುಂದಿನ ದಶಕಗಳಲ್ಲಿ ನಿರ್ಣಾಯ ಪಾತ್ರ ವಹಿಸುವರು ಎಂದು ಹೇಳಿದೆ. ಈ ಇಬ್ಬರು ಈ ದಶಕದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಮೆರಿಕದ ರಾಜಕೀಯ ವಿಮರ್ಶಕ ಮತ್ತು ಕಾಮೆಡಿಯನ್ ಹಸನ್ ಮಿನ್ಹಾಜ್ ಇದ್ದಾರೆ. ಇಪ್ಪತ್ತನೇ ಸ್ಥಾನದಲ್ಲಿ ಕೆನಿಯದ ಓಟಗಾರ ಎಲಿಉಡ್ ಕಿಪಚೊಗೆ ಇದ್ದಾರೆ. ಪಟ್ಟಿಯಲ್ಲಿ ಇತರ ಐವರು ಭಾರತೀಯರೂ ಸೇರಿದ್ದಾರೆ.
ಫೋರ್ಬ್ಸ್ ಕನ್ಹಯ್ಯ ಕುಮಾರ್ ಕುರಿತು ಭವಿಷ್ಯದ ಭಾರತದ ರಾಜಕಾರಣಿಯ ಬಲಶಾಲಿ ಗುರುತು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದೆ. ಭಾರತ ಕಮ್ಯುನಿಸ್ಟ್ ಪಾರ್ಟಿಯ 32 ವರ್ಷದ ನಾಯಕ ಕನ್ಹಯ್ಯ ಕುಮಾರ್ ಜವಾಹರಲಾಲ್ ನೆಹರೂ ಯುನಿವರ್ಸಿಟಿಯ ವಿದ್ಯಾರ್ಥಿ ರಾಜಕೀಯದ ಮುಖವಾಗಿದ್ದು ಅವರ ವಿರುದ್ಧ 2016ರಲ್ಲಿ ದೇಶದ್ರೋಹ ಆರೋಪ ಹೊರಿಸಲಾಗಿದ್ದು ಅದಕ್ಕೆ ಅವರು ಸರಿಯಾದ ಉತ್ತರ ನೀಡಿದ್ದಾರೆ ಎಂದಿದೆ. ಪ್ರಶಾಂತ್ ಕಿಶೋರ್ ಕುರಿತು ಅವರೊಬ್ಬ 2011ರಿಂದ ಒಬ್ಬ ರಾಜಕೀಯ ರಣನೀತಿಜ್ಞನಾಗಿದ್ದು ಬಿಜೆಪಿಯ ಗುಜರಾತ್ ವಿಧಾನಸಭೆ ಚುನಾವಣೆ ಗೆಲ್ಲಲು ಸಹಾಯ ಮಾಡಿದ್ದರು. 2014ರಲ್ಲಿ ನರೇಂದ್ರ ಮೋದಿ ಮತ್ತು 2019ರಲ್ಲಿ ಆಂಧ್ರ ಪ್ರದೇಶದಲ್ಲಿ ವೈಎಸ್ಸಾರ್ ಜಗನ್ಮೋಹನ್ ರೆಡ್ಡಿ ಮತ್ತು ಮಹಾರಾಷ್ಟ್ರದಲ್ಲಿ ಶಿವಸೇನೆಗೆ ರಣತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದಿದೆ.
ಶ್ರೀಲಂಕದ ಅಧ್ಯಕ್ಷ ಮತ್ತು ಬ್ರಿಟನ್ನ ಪ್ರಧಾನಿ ಕೂಡ ಫೋರ್ಬ್ಸ್ ಪಟ್ಟಿಯಲ್ಲಿದ್ದಾರೆ. ಪಟ್ಟಿಯಲ್ಲಿ ಬ್ಯುಸಿನೆಸ್ ಮೆನ್ ಅರ್ಸಲರ್ ಮಿತ್ತಲ್ ಗುಂಪಿನ ಸಿಇಒ ಆದಿತ್ಯ ಮಿತ್ತಲ್, ಗೋಡ್ರೆಜ್ ಕುಟುಂಬ, ಹರಿಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುಆ ಮೊಯಿತ್ರಾ ಸೇರಿದ್ದಾರೆ. ಥೈಲೆಂಡಿನ ಶೆಫ ಗರಿಮ ಅರೋಡಾ , ಶ್ರೀಲಂಕಾದ ಅಧ್ಯಕ್ಷ ಗೌತಬಾಯಿ ರಾಜಪಕ್ಷೆ, ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ ಅರ್ಡರ್ನ್, ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್, ಫಿನ್ಲೆಂಡಿನ ಹೊಸ ಪ್ರಧಾನಿ ಸನಾಮಾರಿನ್ ಮತ್ತು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಪಟ್ಟಿಯಲ್ಲಿದ್ದಾರೆ.












