ಯುರೋಪಿಯನ್ ಯೂನಿಯನ್, ಆಸಿಯಾನ್ ಪ್ರತಿನಿಧಿಗಳಿಂದ ಕಾಶ್ಮೀರಕ್ಕೆ ಭೇಟಿ

0
423

ಸನ್ಮಾರ್ಗ ವಾರ್ತೆ-

ಶ್ರೀನಗರ, ಜ. 8: ಕಾಶ್ಮೀರಕ್ಕೆ ವಿದೇಶ ರಾಜತಾಂತ್ರಿಕ ಪ್ರತಿನಿಧಿಗಳು ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಮುಂದಿನವಾರ ವಿದೇಶ ರಾಜತಾಂತ್ರಿಕ ಪ್ರತಿನಿಧಿಗಳು ಕಾಶ್ಮೀರ ಸಂದರ್ಶಿಸುವರು ಎಂದು ವರದಿಯಾಗಿದೆ. ಯುರೋಪಿಯನ್ ಯೂನಿಯನ್ ಪ್ರತಿನಿಧಿ ತಂಡ, ಆಸಿಯಾನ್ ಪ್ರತಿನಿಧಿ ತಂಡ ಕಾಶ್ಮೀರ ಭೇಟಿಗಾಗಿ ಬರಲಿದೆ ಎನ್ನಲಾಗುತ್ತಿದೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕ ಮೊದಲ ಬಾರಿ ಅಲ್ಲಿಗೆ ವಿದೇಶಿ ತಂಡಗಳು ಬರುತ್ತಿವೆ.

ರಾಜತಾಂತ್ರಿಕ ಮೊದಲ ತಂಡ ಈ ತಿಂಗಳು ಬರುವುದೆಂದು ತಿಳಿದು ಬಂದಿದ್ದು ತಂಡದಲ್ಲಿ 20 ಮಂದಿ ಇರಲಿದ್ದಾರೆ. ಸ್ಥಳೀಯ ರಾಜಕಾರಣಿಗಳು, ವ್ಯಾಪಾರಿಗಳು, ಪತ್ರಕರ್ತರು, ವಿದೇಶ ಸಚಿವಾಲದಯ ಅಧಿಕಾರಿಗಳೊಂದಿಗೆ ಚರ್ಚಿಸುವರು. ಜಮ್ಮುಗೂ ತಂಡ ಭೇಟಿ ನೀಡಲಿದೆ. ಕಾಶ್ಮೀರದ ಸುರಕ್ಷೆಯಲ್ಲಿ ಪಾಕಿಸ್ತಾನ ಸೃಷ್ಟಿಸುವ ಸಮಸ್ಯೆಯನ್ನು ಪ್ರತಿನಿಧಿ ತಂಡದ ಮುಂದೆ ವಿವರಿಸಲಾಗುವುದು. ಗಡಿಯಾಚೆಗಿನ ಭಯೋತ್ಪಾದನೆ ದೇಶದಲ್ಲಿ ಸೃಷ್ಟಿಸುವ ಸಮಸ್ಯೆಗಳನ್ನು ಪ್ರತಿನಿಧಿಗಳ ತಂಡಕ್ಕೆ ಮನವರಿಕೆ ಮಾಡಿಕೊಡಲು ಶ್ರಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.